ಔರಂಗಾಬಾದ್: ಚಾರ್ಲ್ಸ್ ಡಾರ್ವಿನ್ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ಸರಿ ಇಲ್ಲ. ಆದ್ದರಿಂದ ಶಾಲೆ ಹಾಗೂ ಕಾಲೇಜುಗಳ ಪಠ್ಯಕ್ರಮದಲ್ಲಿ ಅದನ್ನು ಬದಲಾಯಿಸುವ ಅಗತ್ಯವಿದೆ. ಮಾನವ ಭೂಮಿ ಮೇಲೆ ಕಾಣಿಸಿಕೊಂಡಂದಿನಿಂದ ಮಾನವನಾಗಿಯೇ ಇದ್ದಾನೆ ಎನ್ನುವ ಮೂಲಕ ಡಾರ್ವಿನ್ ಸಿದ್ಧಾಂತ ತಪ್ಪು ಎಂದು ವಾದಿಸಿದ್ದ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರಿಗೆ ವಿಜ್ಞಾನಿಗಳು ಪತ್ರ ಬರೆದಿದ್ದಾರೆ.
ಶುಕ್ರವಾರ ಔರಂಗಾಬಾದ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಸಿಂಗ್, ಮಂಗ ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ನೋಡಿದ್ದೇವೆ ಎಂದು ನಮ್ಮ ಪೂರ್ವಿಕರು ಲಿಖಿತ ಅಥವಾ ಮೌಖಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ನಾವು ಓದಿದ ಪುಸ್ತಕದಲ್ಲಿ ಅಥವಾ ನಮ್ಮ ಹಿರಿಯರು ನಮಗೆ ಹೇಳಿದ ಕಥೆಗಳಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ ಎಂದು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.