ಖಾರ್ಗೋನ್ (ಮಧ್ಯಪ್ರದೇಶ): ಐಸ್‌ಕ್ರೀಮ್ ತಿಂದ ಬಳಿಕ 25 ಮಕ್ಕಳು ಸೇರಿ 55 ಜನರು ಅಸ್ವಸ್ಥಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಇಲ್ಲಿನ ಆರೋಗ್ಯಾಧಿಕಾರಿ ಗುರುವಾರ ತಿಳಿಸಿದ್ದಾರೆ.
ಘಟನೆಗೆ ಕಾರಣವಾದ ಐಸ್‌ಕ್ರೀಮ್ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
’ಜಿಲ್ಲಾ ಕೇಂದ್ರದಿಂದ 14 ಕಿ.ಮೀ ದೂರದಲ್ಲಿರುವ ಛತಾಲ್ ಗ್ರಾಮದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು.ಈ ವೇಳೆ ಬುಧವಾರ ರಾತ್ರಿ ದಿನೇಶ್ ಕುಶ್ವಾಹ ಎಂಬಾತ ತಯಾರಿಸಿ, ಮಾರಾಟ ಮಾಡಿದ್ದ ಐಸ್ ಕ್ರೀಂ ಅನ್ನು ಜನರು ತಿಂದಿದ್ದಾರೆ’ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ದೌಲತ್ ಸಿಂಗ್ ಚೌಹಾಣ್ ವಿವರಿಸಿದರು.
’ಕಲುಷಿತ ಆಹಾರಸೇವನೆಯಿಂದ ಹೊಟ್ಟೆನೋವು, ವಾಂತಿ, ಕಾಣಿಸಿಕೊಂಡ ಹಿನ್ನೆಲೆಯಲ್ಲಿ 25 ಮಕ್ಕಳು ಸೇರಿದಂತೆ 55 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು’ ಅವರು ಹೇಳಿದರು.
20 ಮಕ್ಕಳು ಮತ್ತು ಇತರ 10 ಜನರನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಮೆಡಿಕಲ್ ಆಫೀಸರ್ ಡಾ ದಿಲೀಪ್ ಸೆಪ್ಟಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.