ADVERTISEMENT

ತಡೋಬಾ ಮೀಸಲು ಪ್ರದೇಶ: 55 ಹುಲಿಗಳು ಸೇರಿ 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಪತ್ತೆ

ಪಿಟಿಐ
Published 26 ಮೇ 2024, 7:13 IST
Last Updated 26 ಮೇ 2024, 7:13 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಾಗ್ಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಟಿಎಟಿಆರ್) ಇತ್ತೀಚೆಗೆ ನಡೆಸಿದ 'ವಾಟರ್‌ಹೋಲ್ ಅನಿಮಲ್ ಸರ್ವೇ'ಯಲ್ಲಿ 55 ಹುಲಿಗಳು ಸೇರಿದಂತೆ ಒಟ್ಟು 5,069 ಕಾಡು ಪ್ರಾಣಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 23 ಮತ್ತು 24 ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ 'ನಿಸರ್ಗಾನುಭವ-2024' ಎಂಬ ಸಮೀಕ್ಷೆಯನ್ನು ಆಯೋಜಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಯಲ್ಲದೆ 160 ನಿಸರ್ಗ ಪ್ರೇಮಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಎಂದು ಟಿಎಟಿಆರ್ ಪ್ರಕಟಣೆಯಲ್ಲಿ ತಿಳಿಸಿದೆ .

ADVERTISEMENT

ಕೋರ್ ಮತ್ತು ಬಫರ್ ವಲಯಗಳಲ್ಲಿ 55 ಹುಲಿಗಳು, 17 ಚಿರತೆಗಳು, 86 ಕಾಡು ನಾಯಿಗಳು, 65 ಕರಡಿಗಳು, 1,458 ಜಿಂಕೆಗಳು, 488 ಕಡವೆ ಮತ್ತು 559 ಕಾಡುಕೋಣಗಳು ಪತ್ತೆಯಾಗಿವೆ ಎಂದು ಟಿಎಟಿಆರ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.