ADVERTISEMENT

ಹೂವಿನಿಂದ ಹೂವಿಗೆ ಹಾರುವ ಚಿಟ್ಟೆಗೊಂದು ಉದ್ಯಾನ

ಏಜೆನ್ಸೀಸ್
Published 3 ಫೆಬ್ರುವರಿ 2018, 6:20 IST
Last Updated 3 ಫೆಬ್ರುವರಿ 2018, 6:20 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ಕಾನ್ಪುರ: ಬಣ್ಣ ಬಣ್ಣದ ಚಿಟ್ಟೆಗಳು... ಚೆಂದದ ರೆಕ್ಕೆಗಳನ್ನು ಬಡಿಯುತ್ತ ಹೂವಿನಿಂದ ಹೂವಿಗೆ ಹಾರುವ, ಒಂದಕ್ಕಿಂತ ಇನ್ನೊಂದು ಭಿನ್ನ, ಆ ಪತಂಗಳ ಸ್ವಚ್ಛಂದ ಹಾರಾಟ ನೋಡಲೊಂದು ಆನಂದ.

ಹತ್ತಾರು ಬಗೆಯ ಹೂವುಗಳ ತೋಟದಲ್ಲಿ ಈ ಸುಂದರ ಚಿಟ್ಟೆಗಳನ್ನು ನೋಡುವ ಅವಕಾಶವನ್ನು ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕರಿಗೆ ಒದಗಿಸಿದೆ.

ಉತ್ತರಪ್ರದೇಶ ರಾಜ್ಯದಲ್ಲೆ ಮೊಟ್ಟಮೊದಲ ಚಿಟ್ಟೆ ಉದ್ಯಾನವನ್ನು ಕಾನ್ಪುರದಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಈಗಾಗಲೇ ಉದ್ಯಾನದಲ್ಲಿ 50 ಪ್ರಭೇದದ ಚಿಟ್ಟೆಗಳು ಕಾಣಿಸಿಕೊಂಡಿವೆ.

ADVERTISEMENT

ಈ ಚಿಟ್ಟೆ ಉದ್ಯಾನಕ್ಕಾಗಿ ₹ 1 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕಾನ್ಪುರ ವನ್ಯಜೀವಿ ಪ್ರಾಧಿಕಾರ ಹೇಳಿದೆ. ಚಿಟ್ಟೆಗಳನ್ನು ಆಕರ್ಷಿಸಲು ಉದ್ಯಾನದಲ್ಲಿ ಒಟ್ಟು 100 ಜಾತಿಯ ಹೂವಿನ ಸಸಿಗಳನ್ನು ನೆಡಲಾಗಿದೆ.

‘ಉದ್ಯಾನದಲ್ಲಿ ಈಗ 50ಕ್ಕಿಂತ ಹೆಚ್ಚಿನ ಪ್ರಭೇದದ ಚಿಟ್ಟೆಗಳು ಇವೆ. ಆದರೆ, ಇವುಗಳನ್ನು ಅಧಿಕೃತವಾಗಿ ಎಣಿಕೆ ಮಾಡಿಲ್ಲವಾದರೂ ಸುತ್ತಲೂ ಅವುಗಳು ಕಾಣಿಸಿಕೊಂಡಿವೆ. 2018ರ ಮಾರ್ಚ್‌ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಉದ್ಯಾನದ ತಜ್ಞ ವೈದ್ಯ ಡಾ.ಆರ್‌.ಕೆ. ಸಿಂಗ್‌ ಹೇಳಿದ್ದಾರೆ.

ವನ್ಯಜೀವಿ ತಾಣಕ್ಕೆ ಭೇಟಿ ನೀಡಿರುವ ಪ್ರವಾಸಿಗರು ಚಿಟ್ಟೆ ಉದ್ಯಾನವನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಉದ್ಯಾನದಲ್ಲಿ ವರ್ಷಪೂರ್ತಿ ಸೌಂದರ್ಯ ವೀಕ್ಷಣೆಗೆ ವಿವಿಧ ಬಗೆಯ 40 ಜಾತಿಯ ಹೂವಿನ ಸಸ್ಯಗಳನ್ನೂ ನೆಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.

</p></p>

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.