ರಾಯ್‌ಪುರ:ಛತ್ತೀಸ್‌ಗಡದ ಕೊಂಡಗಾಂವ್ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ 12ನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ಚಿನ್ನದ ನಾಣ್ಯಗಳಿದ್ದ ಮಡಿಕೆ ಪತ್ತೆಯಾಗಿದೆ.
ಜುಲೈ 10ರಂದು ಕೊರ್ಕೋಟಾ, ಬೆಡ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಗುಂಡಿ ತೆಗೆಯುವ ಸಂದರ್ಭದಲ್ಲಿ57 ಚಿನ್ನದ ನಾಣ್ಯಗಳು, 1 ಬೆಳ್ಳಿ ನಾಣ್ಯ ಹಾಗೂಓಲೆ ಇದ್ದ ಮಡಿಕೆ ಸಿಕ್ಕಿದ್ದು,ಅದನ್ನು ಕೊರ್ಕೋಟಾ ಸರಪಂಚ್ ನೆಹ್ರುಲಾಲ್ ಬಾಘೆಲ್ ಅವರು ಜಿಲ್ಲಾಧಿಕಾರಿ ನೀಲಕಾಂತ್ ತೇಕಂ ವಶಕ್ಕೆಶನಿವಾರ ಒಪ್ಪಿಸಿದ್ದಾರೆ.
‘ನೆಲ ಅಗೆಯುತ್ತಿದ್ದಾಗಮಹಿಳಾ ಕಾರ್ಮಿಕರೊಬ್ಬರಿಗೆ ಮಡಿಕೆ ಕಾಣಿಸಿದ್ದು, ಅವರು ಕೂಡಲೇ ಇತರರಿಗೆ ವಿಷಯ ತಿಳಿಸಿದ್ದಾರೆ.ನಾಣ್ಯಗಳು 12–13ನೇ ಶತಮಾನದಷ್ಟು ಹಳೆಯವು ಎಂಬುದುಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿವೆ’ ಎಂದುತೇಕಂ ಹೇಳಿದ್ದಾರೆ.
ಸದ್ಯ ಮಹಾರಾಷ್ಟ್ರಕ್ಕೆ ಸೇರಿರುವ ವಿದರ್ಭದಲ್ಲಿ ಆಳ್ವಿಕೆ ನಡೆಸುತ್ತಿದ್ದ ಯಾದವ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಬರಹಗಳು ನಾಣ್ಯಗಳ ಮೇಲಿವೆ.
ಯಾದವ ಸಾಮ್ರಾಜ್ಯ ದಂಡಕಾರಣ್ಯದವರಗೂ ವಿಸ್ತರಿಸಿತ್ತು.ಸದ್ಯ ಛತ್ತೀಸ್‌ಗಡದಲ್ಲಿರುವ ಬಸ್ತಾರ್ ಪ್ರಾಂತ್ಯದ ಏಳು ಜಿಲ್ಲೆಗಳು ಅಂದಿನದಂಡಕಾರಣ್ಯದ ವ್ಯಾಪ್ತಿಗೆ ಬರುತ್ತಿದ್ದವು. ರಾಜ್ಯ ಪುರಾತತ್ವಇಲಾಖೆ ನಾಣ್ಯಗಳನ್ನು ಪರೀಕ್ಷೆಗೊಳಪಡಿಸಲಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.