ದೆಹಲಿ: 'ಸಾಂಕ್ರಾಮಿಕ ರೋಗ ಕೋವಿಡ್ ದೇಶದಲ್ಲಿ 577 ಮಕ್ಕಳ ಅನಾಥರನ್ನಾಗಿಸಿದೆ. ತಂದೆ ತಾಯಿರನ್ನು ಕಳೆದುಕೊಂಡ ಆ ಮಕ್ಕಳು ತಮ್ಮ ಹತ್ತಿರದ ಸಂಬಂಧಿಗಳ ಆರೈಕೆಯಲ್ಲಿದ್ದಾರೆ,' ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
'ಈ ಮಕ್ಕಳನ್ನು ಸಂಬಂಧಿಸಿದ ರಾಜ್ಯ ಸರ್ಕಾರಗಳು ಕೈಬಿಟ್ಟಿಲ್ಲ. ಮಕ್ಕಳು ಜಿಲ್ಲಾ ಅಧಿಕಾರಿಗಳ ರಕ್ಷಣೆಯಲ್ಲಿದ್ದಾರೆ. ಆ ಮಕ್ಕಳಿಗೆ ಆಪ್ತಸಮಾಲೋಚನೆ ಅಗತ್ಯವಿದ್ದರೆ ನಿಮ್ಹಾನ್ಸ್ ಸಂಸ್ಥೆಯ ತಂಡ ಸದಾ ಸಿದ್ಧವಿದೆ,' ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
'ಈ ಮಕ್ಕಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ಜಿಲ್ಲೆಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಅನಾಥರಾದ ಮಕ್ಕಳ ಕಲ್ಯಾಣಕ್ಕಾಗಿ ಹಣದ ಕೊರತೆಯೂ ಇಲ್ಲ. ಅವರ ಶ್ರೇಯೋಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಯುನಿಸೆಫ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಸಭೆ ನಡೆಸಿದೆ' ಎಂದು ಮಾಹಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.