ADVERTISEMENT

ಐಐಟಿ–ಬಾಂಬೆ: ಕ್ಯಾಂಟೀನ್‌ನ 6 ಟೇಬಲ್ ಸಸ್ಯಾಹಾರಿಗಳಿಗೆ ಮೀಸಲು

ಪಿಟಿಐ
Published 28 ಸೆಪ್ಟೆಂಬರ್ 2023, 15:27 IST
Last Updated 28 ಸೆಪ್ಟೆಂಬರ್ 2023, 15:27 IST
<div class="paragraphs"><p>ಪ್ರಾತಿನಿಧಕ ಚಿತ್ರ</p></div>

ಪ್ರಾತಿನಿಧಕ ಚಿತ್ರ

   

ಮುಂಬೈ : ಮೂರು ಹಾಸ್ಟೆಲ್‌ಗಳ ಕ್ಯಾಂಟೀನ್‌ನಲ್ಲಿನ ಆರು ಟೇಬಲ್‌ಗಳನ್ನು ಕೇವಲ ‘ಸಸ್ಯಾಹಾರಕ್ಕೆ ಮಾತ್ರ’ ಬಳಸಲು ಮೀಸಲಾಗಿರಿಸಿ ಐಐಟಿ ಬಾಂಬೆ ಮೆಸ್‌ ಸಮಿತಿ ತೀರ್ಮಾನ ಕೈಗೊಂಡಿದೆ.

‘ಕ್ಯಾಂಟೀನ್‌ನಲ್ಲಿ ಆಹಾರ ತಾರತಮ್ಯತೆ ಇದೆ’ ಎಂದು ಕೆಲ ವಿದ್ಯಾರ್ಥಿಗಳು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಬೆಳವಣಿಗೆಯ ಎರಡು ತಿಂಗಳ ನಂತರ ಮೆಸ್ ಸಮಿತಿಯು ಆರು ಟೇಬಲ್‌ಗಳನ್ನು ಸಸ್ಯಾಹಾರಿಗಳಿಗೆ ಮೀಸಲಿಡುವ ನಿರ್ಧಾರ ಕೈಗೊಂಡಿದೆ.

ADVERTISEMENT

’ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಮೆಸ್‌ ಸಮಿತಿ ಕಠಿಣಕ್ರಮ ಕೈಗೊಳ್ಳಲಿದೆ. ಸೂಕ್ತ ದಂಡವನ್ನು ವಿಧಿಸಲಿದೆ ಎಂದು ಎಚ್ಚರಿಸಲಾಗಿದೆ. ನಿಯಮ ಉಲ್ಲಂಘನೆಯಿಂದ ಸೌಹಾರ್ದಕ್ಕೆ ಧಕ್ಕೆಯಾಗಲಿದೆ’ ಎಂದು ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಕಳಹಿಸಿರುವ ಇ–ಮೇಲ್‌ನಲ್ಲಿ ತಿಳಿಸಿದೆ.

‘ಹಾಸ್ಟೆಲ್‌ನಲ್ಲಿರುವ ಪ್ರತಿಯೊಬ್ಬರೂ ಅರಾಮ ಮತ್ತು ಅನುಕೂಲಕರ ಅನುಭವ ಹೊಂದಬೇಕು ಎಂಬುದು ನಮ್ಮ ಗುರಿ. ಇದಕ್ಕಾಗಿ ನಾವು ಪೂರಕಕ ವಾತಾವರಣ ನಿರ್ಮಿಸಲು ಬಯಸಿದ್ದೇವೆ. ಆರು ಟೇಬಲ್‌ಗಳನ್ನು ಸಸ್ಯಾಹಾರಿಗಳಿಗೆ ಮೀಸಲಾಗಿಟ್ಟಿದ್ದೇವೆ’ ಎಂದು ತಿಳಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯೆಗಾಗಿ ಐಐಟಿ ಬಾಂಬೆ ಆಡಳಿತಕ್ಕೆ ಕರೆ ಮಾಡಿ, ಸಂದೇಶ ಕಳುಹಿಸಲಾಯಿತಾದರೂ ಸ್ಪಂದಿಸಲಿಲ್ಲ.

ಜುಲೈ ತಿಂಗಳಲ್ಲಿ ಕ್ಯಾಂಟಿನ್‌ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ ಇಲ್ಲಿಗೆ ಪ್ರವೇಶ’ ಎಂಬ ಭಿತ್ತಿಪತ್ರ ಕಾಣಿಸಿಕೊಂಡಿತ್ತು. ಇದರ ಫೋಟೊಗಳು ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು, ವಿದ್ಯಾರ್ಥಿಗಳ ಒಂದು ವರ್ಗ ಇದರ ವಿರುದ್ಧ ಪ್ರತಿಭಟನೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.