ADVERTISEMENT

₹600 ಕೋಟಿ ಅಕ್ರಮ ವಹಿವಾಟು ಆರೋಪ ವದಂತಿಯಷ್ಟೇ: ತೇಜಸ್ವಿ ಯಾದವ್‌

ಪಿಟಿಐ
Published 12 ಮಾರ್ಚ್ 2023, 14:05 IST
Last Updated 12 ಮಾರ್ಚ್ 2023, 14:05 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಪಟ್ನಾ (ಪಿಟಿಐ): ಪರಿಶೀಲನೆ ವೇಳೆ ₹600 ಕೋಟಿ ಅಕ್ರಮ ವಹಿವಾಟು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿರುವುದನ್ನು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ‘ವದಂತಿ’ ಎನ್ನುವ ಮೂಲಕ ತಳ್ಳಿಹಾಕಿದ್ದಾರೆ.

‘ಇ.ಡಿ ಪರಿಶೀಲನೆಯಲ್ಲಿ ಜಪ್ತಿ ಮಾಡಿರುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದಲ್ಲಿ ಬಿಜೆಪಿ ಮುಜುಗರ ಅನುಭವಿಸಲಿದೆ. ಕೇಂದ್ರ ಸರ್ಕಾರ ‘ಮೂಲಗಳ ಹೆಸರಿನಲ್ಲಿ’ ಮತ್ತೊಮ್ಮೆ ವದಂತಿಗಳನ್ನು ಹರಡುತ್ತಿದೆ’ ಎಂದು ಅವರು ಹೇಳಿದರು.

‘₹600 ಕೋಟಿ ಹೊಸ ಕತೆಗೂ ಮುನ್ನ ಈ ಹಿಂದಿನ ಇ.ಡಿ. ದಾಳಿಗಳ ತನಿಖೆ ಪೂರ್ಣಗೊಳಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರ ನಿವಾಸಗಳಲ್ಲಿ ಶೋಧ ನಡೆಸಿ ದಾಖಲೆ ಇಲ್ಲದ ₹1 ಕೋಟಿ ನಗದು ಜಪ್ತಿ ಮಾಡಿದ್ದು, ₹600 ಕೋಟಿ ಅಕ್ರಮ ವಹಿವಾಟು ನಡೆಸಿರುವುದನ್ನು ಪತ್ತೆ ಹಚ್ಚಲಾಗಿದೆ’ ಎಂದು ಇ.ಡಿ ಅಧಿಕಾರಿಗಳು ಶನಿವಾರ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.