ADVERTISEMENT

ಲೋಕಸಭೆ ಚುನಾವಣೆ | ಆರನೇ ಹಂತದಲ್ಲಿ ಶೇ 61.20 ಮತದಾನ: ಈ ಬಾರಿಯ ಕನಿಷ್ಠ

ಪಿಟಿಐ
Published 26 ಮೇ 2024, 3:21 IST
Last Updated 26 ಮೇ 2024, 3:21 IST
<div class="paragraphs"><p>ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ಮತದಾನ ಮಾಡಲು ಮಹಿಳೆಯರು ಸರದಿಯಲ್ಲಿನಿಂತಿರುವುದು</p></div>

ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ಮತದಾನ ಮಾಡಲು ಮಹಿಳೆಯರು ಸರದಿಯಲ್ಲಿನಿಂತಿರುವುದು

   

-ಪಿಟಿಐ ಚಿತ್ರ

ನವದೆಹಲಿ: ಶನಿವಾರ ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ 61.20 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ADVERTISEMENT

ಶನಿವಾರ ರಾತ್ರಿ 11.45ರ ವೇಳೆಗಿನ ಮಾಹಿತಿ ಇದಾಗಿದ್ದು, ಅಂದಾಜು ಅಂಕಿ ಅಂಶಗಳಾಗಿವೆ. ಇದು ಪರಿಷ್ಕರಣೆಗೊಳ್ಳಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಎಲ್ಲಾ ಹಂತಗಳಿಗೆ ಹೋಲಿಸಿದರೆ ದಾಖಲಾದ ಕಡಿಮೆ ಮತದಾನ ಪ್ರಮಾಣ ಇದು. ಐದನೇ ಹಂತದಲ್ಲಿ 2019ರಲ್ಲಿ ಶೇ 62.20ರಷ್ಟು ಮತದಾನವಾಗಿತ್ತು.

ಆರನೇ ಹಂತದಲ್ಲಿ ಎಂಟು ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳು 58 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 2019ರಲ್ಲಿ ಈ ಕ್ಷೇತ್ರಗಳಲ್ಲಿ ಶೇ 64.4ರಷ್ಟು ಮತದಾನವಾಗಿತ್ತು.

ನಾಲ್ಕನೇ ಹಂತದಲ್ಲಿ ಶೇ 69.16, ಮೂರನೇ ಹಂತದಲ್ಲಿ ಶೇ 65.68, ಎರಡನೇ ಹಂತದಲ್ಲಿ ಶೇ 66.71, ಮೊದಲ ಹಂತದಲ್ಲಿ ಶೇ 66.14ರಷ್ಟು ಮತದಾನವಾಗಿತ್ತು.

ನಿಖರವಾದ ಮತದಾನ ಪ್ರಮಾಣ ಫಲಿತಾಂಶದ ಬಳಿಕವಷ್ಟೇ ತಿಳಿಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.