ADVERTISEMENT

5 ವರ್ಷಗಳಲ್ಲಿ 628 ಹುಲಿಗಳ ಸಾವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 19:41 IST
Last Updated 26 ಜುಲೈ 2024, 19:41 IST
   

ನವದೆಹಲಿ(ಪಿಟಿಐ): ಬೇಟೆ ಸೇರಿದಂತೆ ನೈಸರ್ಗಿಕ ಕಾರಣಗಳು ಮತ್ತು ಇತರ ಕಾರಣಗಳಿಂದಾಗಿ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 628 ಹುಲಿಗಳು ಸಾವಿಗೀಡಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಪ್ರಕಾರ, ಈ ಅವಧಿಯಲ್ಲಿ ಹುಲಿ ದಾಳಿಯಲ್ಲಿ 349 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ 200 ಸಾವುಗಳು ದಾಖಲಾಗಿವೆ. 

ದೇಶದಲ್ಲಿ 2019ರಲ್ಲಿ 96, 2020ರಲ್ಲಿ 106, 2021ರಲ್ಲಿ 127, 2022ರಲ್ಲಿ 121 ಮತ್ತು 2023ರಲ್ಲಿ 178 ಹುಲಿಗಳು ಸಾವಿಗೀಡಾಗಿವೆ ಎಂದು ಸರ್ಕಾರದ ಅಂಕಿ ಅಂಶ ಹೇಳಿದೆ.

ADVERTISEMENT

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, 2019 ಮತ್ತು 2020 ರಲ್ಲಿ ತಲಾ 49 ಜನರು, 2021ರಲ್ಲಿ 59 ಜನರು, 2022ರಲ್ಲಿ 110 ಮತ್ತು 2023ರಲ್ಲಿ 82 ಜನರು ಹುಲಿ ದಾಳಿಯಲ್ಲಿ ಸಿಕ್ಕಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.