ಅಯೋಧ್ಯೆ: ಇಲ್ಲಿನ ಮಾ ಕಾಮಾಖ್ಯ ಧಾಮ ದೇವಸ್ಥಾನದಲ್ಲಿ 65 ವರ್ಷದ ನಕ್ಕದ್ ಯಾದವ್ ಎಂಬುವವರು ತಮ್ಮಗಿಂತ 42 ವರ್ಷ ಕಿರಿಯ ಯುವತಿಯೊಂದಿಗೆ ವಿವಾಹವಾಗಿದ್ದಾರೆ.
ಭಾನುವಾರ ಮದುವೆ ನಡೆದಿದೆ. ಈ ವೇಳೆ ವಧು ನಂದಿನಿ(23) ಮದುವೆ ಕುರಿತು ಸಂತೋಷ ವ್ಯಕ್ತಪಡಿಸಿದ್ದು, ವಯಸ್ಸಿನ ವ್ಯತ್ಯಾಸದ ಬಗ್ಗೆ ಬೇಸರವಿಲ್ಲ ಎಂದಿದ್ದಾರೆ.
ಮದುವೆ ಬಗ್ಗೆ ಯಾದವ್ ಅವರೂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ’ನನಗೆ ಆರು ಮಂದಿ ಹೆಣ್ಣುಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ತಮ್ಮ ತಮ್ಮ ಕುಟುಂಬದೊಂದಿಗೆ ಸಂತಸದ ಜೀವನ ನಡೆಸುತ್ತಿದ್ದಾರೆ. ನನ್ನ ಪತ್ನಿಯ ಮರಣದ ನಂತರ ಒಂಟಿತನ ಕಾಡಿತ್ತು. ಹಾಗಾಗಿ ಮತ್ತೆ ಮದುವೆಯಾಗಿದ್ದೇನೆ. ಇದಕ್ಕೆ ಯುವತಿಯ ಮನೆಯವರ ಅನುಮತಿಯೂ ಇದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.