ADVERTISEMENT

ಟ್ಯಾಂಕ್‌ ಸ್ವಚ್ಛಗೊಳಿಸಲು ಇಳಿದ ಏಳು ಮಂದಿ ಉಸಿರುಗಟ್ಟಿ ಸಾವು 

ಏಜೆನ್ಸೀಸ್
Published 15 ಜೂನ್ 2019, 6:42 IST
Last Updated 15 ಜೂನ್ 2019, 6:42 IST
   

ವಡೋದರ: ಗುಜರಾತ್‌ನ ವಡೋದರ ಸಮೀಪದ ಫರ್ತಿಕ್ವೈ ಎಂಬಲ್ಲಿ ಹೋಟೆಲ್‌ವೊಂದರ ಟ್ಯಾಂಕ್‌ ಸ್ವಚ್ಛಗೊಳಿಸಲು ಇಳಿದಿದ್ದ ಏಳು ಮಂದಿ ವಿಷಾನಿಲ ಸೇವನೆಯಿಂದ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ.

ಮೃತರ ಪೈಕಿ ಮೂವರು ಹೋಟೆಲ್‌ ಸಿಬ್ಬಂದಿಯಾಗಿದ್ದು, ಇನ್ನುಳಿದ ನಾಲ್ವರು ಪೌರಕಾರ್ಮಿಕರು ಎನ್ನಲಾಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಹೋಟೆಲ್‌ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಮೃತ ಹೋಟೆಲ್‌ ಸಿಬ್ಬಂದಿಯನ್ನು ಜೈ ವಾಸವ (24), ವಿಜಯ್‌ ಚೌಹಾಣ್‌ (22), ಸಹದೇವ ವಾಸವ (22) ಎಂದು ಗುರುತಿಸಲಾಗಿದೆ. ಮೃತ ಪೌರ ಕಾರ್ಮಿಕರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಹೊಟೇಲ್‌ನ ಟ್ಯಾಂಕ್‌ ಸ್ವಚ್ಛಗೊಳಿಸಲೆಂದು ಮೊದಲಿಗೆ ಸಿಬ್ಬಂದಿಯೊಬ್ಬರುಟ್ಯಾಂಕ್‌ಗೆ ಇಳಿದಿದ್ದಾರೆ. ಕೆಲ ನಿಮಿಷಗಳ ನಂತರ ಅವರು ಪ್ರಜ್ಞಾ ಹೀನರಾಗಿದ್ದಾರೆ. ಅವರನ್ನು ಮೇಲೆತ್ತಲೆಂದು ಮತ್ತೊಬ್ಬರು ಇಳಿದಿದ್ದಾರೆ. ಆವರಿಗೂ ಅದೇ ಪರಿಸ್ಥಿತಿಯುಂಟಾಗಿದೆ. ಹೀಗೆ ಮೂವರೂ ಸಾವಿಗೀಡಾಗಿದ್ದರು. ವಿಷಾನಿಲದ ಪರಿಣಾಮವಾಗಿಹೋಟೆಲ್‌ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ನಂತರ ಟಾಂಕ್‌ ಇಳಿದ ನಾಲ್ವರು ಕಾರ್ಮಿಕರೂ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.

ADVERTISEMENT

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ದೇಹಗಳನ್ನು ಹೊರತೆಗೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.