ನವದೆಹಲಿ: ಏಳು ರಾಜ್ಯ ಸರ್ಕಾರಗಳು ಒಟ್ಟಾರೆ 63 ವಿಶೇಷ ಶ್ರಮಿಕ್ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಿವೆ. ಕರ್ನಾಟಕ 6 ರೈಲುಗಳ ಸಂಚಾರಕ್ಕೆ ಮನವಿ ಮಾಡಿದೆ.
ಕೇರಳದಿಂದ ಒಟ್ಟು 32 ರೈಲುಗಳು ಸಂಚರಿಸಲಿವೆ. ಬಹುತೇಕ ರೈಲುಗಳು ಪಶ್ಚಿಮ ಬಂಗಾಳಕ್ಕೆ ಅಂದರೆ ಒಟ್ಟು 23 ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ.
ತಮಿಳುನಾಡು (12 ಶ್ರಮಿಕ್ ರೈಲುಗಳು), ಜಮ್ಮು ಮತ್ತು ಕಾಶ್ಮೀರ (9), ಆಂಧ್ರಪ್ರದೇಶ (3), ಪಶ್ಚಿಮ ಬಂಗಾಳ (2), ಗುಜರಾತ್ (1) ರಾಜ್ಯಗಳು ವಿಶೇಷ ಶ್ರಮಿಕ್ ರೈಲುಗಳಿಗೆ ಮನವಿ ಸಲ್ಲಿಸಿವೆ.
ವಲಸೆ ಕಾರ್ಮಿಕರ ಸಂಚಾರಕ್ಕಾಗಿ ಮನವಿ ಸಲ್ಲಿಸುವಂತೆ ರೈಲ್ವೆ ಮಂಡಳಿಯ ಅಧ್ಯಕ್ಷರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.