ನವದೆಹಲಿ: ‘ಭಾರತೀಯ ನೌಕಾಪಡೆಯ ಅತಿ ದೊಡ್ಡ ದ್ವೈವಾರ್ಷಿಕ ಸಮರಾಭ್ಯಾಸವಾದ ‘ಟ್ರೋಪೆಕ್ಸ್’ (ಥಿಯೇಟರ್ ಲೆವೆಲ್ ಆಪರೇಷನಲ್ ರೆಡಿನೆಸ್ ಎಕ್ಸರ್‌ಸೈಸ್) ಗುರುವಾರ ಕೊನೆಗೊಂಡಿದ್ದು, ಇದರಲ್ಲಿ 70 ಹಡಗುಗಳು, ಆರು ಜಲಾಂತರ್ಗಾಮಿ ನೌಕೆಗಳು ಹಾಗೂ 75ಕ್ಕೂ ಹೆಚ್ಚು ಯುದ್ಧ ವಿಮಾನಗಳು ಭಾಗಿಯಾಗಿದ್ದವು ಎಂದು ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಮರಾಭ್ಯಾಸವು ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಸಹಿತ ಹಿಂದೂ ಮಹಾಸಾಗರದಲ್ಲಿ 2.1 ಕೋಟಿ ಚದರ ನಾಟಿಕಲ್ ಮೈಲು ಪ್ರದೇಶದಲ್ಲಿ ನಡೆದಿದೆ’ ಎಂದು ಅವರು ತಿಳಿಸಿದರು.
2022ರ ನವೆಂಬರ್‌ನಲ್ಲಿ ಸಮಾರಾಭ್ಯಾಸವು ಪ್ರಾರಂಭವಾಗಿತ್ತು. ಇದರಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ಕರಾವಳಿ ಕಾವಲುಪಡೆಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.