ADVERTISEMENT

ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

ಪಿಟಿಐ
Published 15 ನವೆಂಬರ್ 2024, 10:37 IST
Last Updated 15 ನವೆಂಬರ್ 2024, 10:37 IST
<div class="paragraphs"><p>ಗುಜರಾತ್‌ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ</p></div>

ಗುಜರಾತ್‌ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

   

ಪಿಟಿಐ ಚಿತ್ರ

ನವದೆಹಲಿ: ಗುಜರಾತ್‌ ಕರಾವಳಿ ತೀರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 700 ಕೆ.ಜಿ. ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, 8 ಮಂದಿ ಇರಾನ್‌ ಪ್ರಜೆಗಳನ್ನು ಬಂಧಿಸಿದ್ದಾರೆ.

ADVERTISEMENT

‘ಗುಪ್ತಚರ ದಳ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನೌಕಾಪಡೆ ಅಧಿಕಾರಿಗಳು ಮಾದಕ ವಸ್ತುವಿದ್ದ ಹಡಗನ್ನು ಗುರುತಿಸಿ ಶೋಧ ನಡೆಸಲು ನೆರವಾದರು. ಹೀಗಾಗಿ ಭಾರತಕ್ಕೆ ತರಲಾಗುತ್ತಿದ್ದ 700 ಕೆ.ಜಿ. ಮೆಥಾಮ್‌ಫೆಟಮಿನ್‌ ರಾಸಾಯನಿಕವನ್ನು ತಡೆಹಿಡಿಯಲಾಗಿದೆ. ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್‌ನ ಭಯೊತ್ಪಾದನಾ ನಿಗ್ರಹ ದಳದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಗೆ ‘ಸಾಗರ್‌ ಮಂಥನ್‌– 4’ ಎಂದು ಹೆಸರಿಡಲಾಗಿದೆ’ ಎಂದು ಮಾದಕ ವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಹೇಳಿಕೆಯಲ್ಲಿ ತಿಳಿಸಿದೆ.

ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್‌ ಶಾ, ‘ನಮ್ಮ ಅಧಿಕಾರಿಗಳು ವಿದೇಶಿ ಮಾದಕ ದ್ರವ್ಯ ಸಾಗಣೆಯನ್ನು ಪತ್ತೆ ಮಾಡಿ, ಅದನ್ನು ತಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಡ್ರಗ್ಸ್‌ ಮುಕ್ತ ಭಾರತದ ಯೋಜನೆಗೆ ಇದು ಪೂರಕವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.