ತಿರುವನಂತಪುರ:ರಾಜ್ಯದಲ್ಲಿ ಮಳೆ, ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಆಗಸ್ಟ್ 8ರಿಂದ 11ರವರೆಗೆ ರಾಜ್ಯದಲ್ಲಿ ಮಳೆ, ಪ್ರವಾಹ ಸಂಬಂಧಿ ಅವಘಡಗಳಲ್ಲಿ 76 ಜನ ಮೃತಪಟ್ಟಿದ್ದಾರೆ. 58 ಜನ ನಾಪತ್ತೆಯಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಿಳಿಸಿದೆ.
ಈ ಮಧ್ಯೆ, ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಆಗಮಿಸಿದ್ದು, ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಕೈಥಪೋಯಿಲ್‌ನ ಶಿಬಿರದಲ್ಲಿಪರಿಹಾರ ಸಾಮಗ್ರಿ ವಿತರಣೆ ವೇಳೆ ಮಾತನಾಡಿದ ರಾಹುಲ್, ‘ನಿಮ್ಮ ಸಂಸದನಾಗಿ ಮುಖ್ಯಮಂತ್ರಿಯವರಿಗೆ ಕರೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪ್ರಮಾಣದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದೇನೆ. ಪ್ರಧಾನ ಮಂತ್ರಿಯವರಿಗೂ ಕರೆ ಮಾಡಿ ಮಾತನಾಡಿದ್ದು ಇಲ್ಲಿನ ದುರಂತದ ಬಗ್ಗೆ ವಿವರಿಸಿದ್ದೇನೆ. ಕೇಂದ್ರ ಸರ್ಕಾರದ ನೆರವನ್ನು ಕೋರಿದ್ದೇನೆ’ ಎಂದು ತಿಳಿಸಿದ್ದಾರೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.