ADVERTISEMENT

ತವಾಂಗ್‌: 73 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜಾರೋಹಣ

ಪಿಟಿಐ
Published 30 ಡಿಸೆಂಬರ್ 2023, 14:29 IST
Last Updated 30 ಡಿಸೆಂಬರ್ 2023, 14:29 IST
.
.   

ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ 73 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಬಿಜೆಪಿ ಶಾಸಕ ತ್ಸೆರಿಂಗ್ ತಾಶಿ ಅವರು ಶನಿವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದಾರೆ.

ಧ್ವಜಾರೋಹಣ ಮಾಡಿರುವ ಪ್ರದೇಶವು ಸಮುದ್ರ ಮಟ್ಟದಿಂದ 15,200 ಅಡಿ ಎತ್ತರದಲ್ಲಿದೆ ಎಂದು ಮೂಲಗಳು ಹೇಳಿವೆ.

ಬಳಿಕ ಮಾತನಾಡಿದ ತಾಶಿ, ‘ಧ್ವಜಾರೋಹಣದಿಂದ ದೇಶದ ಏಕತೆ ಮತ್ತು ಸಮಗ್ರತೆಗೆ ಪ್ರೇರಣೆ ಸಿಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಧ್ವಜವನ್ನು ನಿರ್ಮಿಸಿದ ಫ್ಲ್ಯಾಗ್‌ ಫೌಂಡೇಷನ್‌ ಆಫ್‌ ಇಂಡಿಯಾ ಮತ್ತು ಧ್ವಜಾರೋಹಣಕ್ಕೆ ಸಹಕರಿಸಿದ ಭಾರತೀಯ ಸೇನೆಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಫ್ಲ್ಯಾಗ್‌ ಫೌಂಡೇಷನ್‌ ಆಫ್‌ ಇಂಡಿಯಾ ಸಿಇಒ ಮೇಜರ್‌ ಜನರಲ್‌ (ನಿವೃತ್ತ) ಆಶಿಮ್‌ ಕೊಹ್ಲಿ, ತವಾಂಗ್‌ ಬ್ರಿಗೇಡ್‌ ಕಮಾಂಡರ್‌ ಬ್ರಿಗೇಡಿಯರ್‌ ವಿಪುಲ್‌ ಸಿಂಗ್‌ ರಜಪೂತ್‌, ಸೇನೆ, ಐಟಿಬಿಪಿ ಯೋಧರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.