ADVERTISEMENT

ಮ್ಯಾನ್ಮಾರ್‌ | ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ

ಪಿಟಿಐ
Published 22 ಜುಲೈ 2024, 2:30 IST
Last Updated 22 ಜುಲೈ 2024, 2:30 IST
<div class="paragraphs"><p>ಮ್ಯಾನ್ಮಾರ್‌ನಲ್ಲಿ ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ</p></div>

ಮ್ಯಾನ್ಮಾರ್‌ನಲ್ಲಿ ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ

   

 (ಚಿತ್ರ ಕೃಪೆ– X/@IndiainMyanmar)

ನವದೆಹಲಿ: ಮ್ಯಾನ್ಮಾರ್‌ನ ಮೈವಾಡ್ಡಿಯ ಹಾ ಲು ಪ್ರದೇಶದಲ್ಲಿ ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಯಾಂಗೋನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

ADVERTISEMENT

ಇಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಭಾರತೀಯ ಪ್ರಜೆಗಳು ಅಕ್ರಮ ಉದ್ಯೋಗ ಆಮಿಷಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಯಭಾರ ಕಚೇರಿ ತನ್ನ ಸಲಹೆಯನ್ನು ಪುನರುಚ್ಚರಿಸಿದೆ.

ಮ್ಯಾವಾಡ್ಡಿಯ ಹಾ ಲುದಲ್ಲಿ 8 ಮಂದಿ ಭಾರತೀಯ ಪ್ರಜೆಗಳನ್ನು ನಿನ್ನೆ ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತವಾಗಿ ಮ್ಯಾನ್ಮಾರ್ ವಲಸೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ರಾಯಭಾರ ಕಚೇರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ ಅಧಿಕಾರಿಗಳ ಬೆಂಬಲ ಮತ್ತು ಸ್ಥಳೀಯ ಆಡಳಿತದ ಸಹಕಾರ ನಿರ್ಣಾಯಕವಾಗಿತ್ತು. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇಂತಹ ನಕಲಿ ಉದ್ಯೋಗ ದಂಧೆಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದು ರಾಯಭಾರ ಕಚೇರಿ ಪೋಸ್ಟ್‌ನಲ್ಲಿ ತಿಳಿಸಿದೆ.

ಮೈವಾಡ್ಡಿ ಪಟ್ಟಣದ ದಕ್ಷಿಣದಲ್ಲಿರುವ ಹಾ ಲು ಪ್ರದೇಶದಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಉದ್ಯೋಗ ವಂಚನೆಗೆ ಬಲಿಯಾದ ಭಾರತೀಯ, ಮಲೇಷ್ಯಾ, ಯುಎಇ ಮೂಲದ ಸಂತ್ರಸ್ತರನ್ನು ಥೈಲ್ಯಾಂಡ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡುವ ಉದ್ಯೋಗ ಆಮಿಷಕ್ಕೆ ಬಲಿಯಾಗದಂತೆ ಭಾರತೀಯರಿಗೆ ರಾಯಭಾರ ಕಚೇರಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.