ಪುಣೆ: ಪುಣೆಯ ಬಾರ್ ಒಂದು ಅನುಮತಿಯ ಅವಧಿಯನ್ನು ಮೀರಿ ಕಾರ್ಯಾಚರಣೆ ನಡೆಸುತ್ತಿದ್ದುದು ಪೊಲೀಸರ ಗಮನಕ್ಕೆ ಬಂದಿದ್ದು, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಫರ್ಗ್ಯುಸನ್ ಕಾಲೇಜು ರಸ್ತೆಯಲ್ಲಿ ಇರುವ ‘ಲಿಕ್ವಿಡ್ ಲೀಷರ್ ಲೌಂಜ್’ (ಎಲ್3) ಬಾರ್‌ನಲ್ಲಿ ಕೆಲವರು ಮಾದಕ ಪದಾರ್ಥವನ್ನು ಹೋಲುವ ವಸ್ತುಗಳನ್ನು ಹೊಂದಿರುವ ವಿಡಿಯೊ ಒಂದು ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.
ಈ ಬಾರ್ ಭಾನುವಾರ ಮುಂಜಾನೆ 5 ಗಂಟೆಯವರೆಗೂ ಕಾರ್ಯಚರಣೆ ನಡೆಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪುಣೆಯಲ್ಲಿ ನಸುಕಿನ 1.30ರವರೆಗೂ ಮದ್ಯ ಸರಬರಾಜು ಮಾಡಲು ಅವಕಾಶ ಇದೆ. ಆದರೆ ಈ ಬಾರ್‌ನಲ್ಲಿ ಈ ಸಮಯಮಿತಿಯನ್ನು ಮೀರಿ ಮದ್ಯ ಪೂರೈಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
‘ಈ ಬಾರ್ ತನ್ನ ಮುಂಭಾಗದ ಬಾಗಿಲನ್ನು ನಸುಕಿನ 1.30ಕ್ಕೆ ಮುಚ್ಚುತ್ತಿತ್ತು. ಆದರೆ ಹಿಂಬಾಗಿಲ ಮೂಲಕ ಬೆಳಗಿನ ಜಾವದವರೆಗೂ ಪ್ರವೇಶ ನೀಡುತ್ತಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ವಿರುದ್ಧ ಐಪಿಸಿ ಹಾಗೂ ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಹಾಗೂ ಇತರ ಕೆಲವು ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.