ADVERTISEMENT

ಛತ್ತೀಸಗಢ: ಸಿಡಿಲು ಬಡಿದು ಶಾಲಾ ಮಕ್ಕಳು ಸೇರಿದಂತೆ 8 ಮಂದಿ ಸಾವು

ಪಿಟಿಐ
Published 23 ಸೆಪ್ಟೆಂಬರ್ 2024, 10:05 IST
Last Updated 23 ಸೆಪ್ಟೆಂಬರ್ 2024, 10:05 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ರಾಜನಂದಗಾಂವ್ (ಛತ್ತೀಸಗಢ): ‌ಸಿಡಿಲು ಬಡಿದು ಕೆಲವು ಶಾಲಾ ಮಕ್ಕಳು ಸೇರಿದಂತೆ 8 ಜನ ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ. ಛತ್ತೀಸಗಢ ರಾಜನಂದಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋರತರಾಯ್ ಗ್ರಾಮದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಾಥಮಿಕ ಮೂಲಗಳ ಪ್ರಕಾರ, 'ಸಿಡಿಲು ಬಡಿದು ಶಾಲಾ ಮಕ್ಕಳು ಸೇರಿದಂತೆ 8 ಜನ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ರಾಜನಂದಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗಾರ್ಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.