ADVERTISEMENT

ಚಲಿಸುವ ರೈಲಿನಿಂದ ಬಿದ್ದ ಬಾಲಕಿ: ರಾತ್ರಿ 16 ಕಿ.ಮೀ ನಡೆದು ಹುಡುಕಿದ ಪೊಲೀಸ್!

ಚಲಿಸುವ ರೈಲಿನಿಂದ ಆಯತಪ್ಪಿ ಬಿದ್ದಿದ್ದ ಬಾಲಕಿಯನ್ನು ಉತ್ತರ ಪ್ರದೇಶದ ಝಾನ್ಸಿ ಜಿಆರ್‌ಪಿ ಪೊಲೀಸರು, ರೈಲ್ವೆ ಸಿಬ್ಬಂದಿ ಹಾಗೂ ಆರ್‌ಪಿಎಫ್ ಪೊಲೀಸರು ರಕ್ಷಿಸಿರುವ ಘಟನೆ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2024, 6:07 IST
Last Updated 16 ಅಕ್ಟೋಬರ್ 2024, 6:07 IST
<div class="paragraphs"><p>ರೈಲಿನಿಂದ ಬಿದ್ದ ಬಾಲಕಿ: ರಾತ್ರಿ 16 ಕಿ.ಮೀ ಕಾಲ್ನಡಿಗೆ ಮೂಲಕ ಹುಡುಕಿದ ಪೊಲೀಸ್!</p></div>

ರೈಲಿನಿಂದ ಬಿದ್ದ ಬಾಲಕಿ: ರಾತ್ರಿ 16 ಕಿ.ಮೀ ಕಾಲ್ನಡಿಗೆ ಮೂಲಕ ಹುಡುಕಿದ ಪೊಲೀಸ್!

   

ಬೆಂಗಳೂರು: ಚಲಿಸುವ ರೈಲಿನಿಂದ ಆಯತಪ್ಪಿ ಬಿದ್ದಿದ್ದ 8 ವರ್ಷದ ಬಾಲಕಿಯನ್ನು ಉತ್ತರ ಪ್ರದೇಶದ ಝಾನ್ಸಿ ಜಿಆರ್‌ಪಿ ಪೊಲೀಸರು, ರೈಲ್ವೆ ಸಿಬ್ಬಂದಿ ಹಾಗೂ ಆರ್‌ಪಿಎಫ್ ಪೊಲೀಸರು ರಕ್ಷಿಸಿರುವ ಘಟನೆ ನಡೆದಿದೆ.

ಝಾನ್ಸಿಯಿಂದ ಲಕ್ನೊಕ್ಕೆ ತನ್ನ ಪೋಷಕರೊಂದಿಗೆ ತೆರಳುತ್ತಿದ್ದ ಬಾಲಕಿ, ಝಾನ್ಸಿ ಬಳಿ ರಾತ್ರಿ ಆಯತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಳು. ಕೂಡಲೇ ಪೋಷಕರು ಸಹಾಯವಾಣಿ 139 ಗೆ ಕರೆ ಮಾಡಿ ಸಂಕಷ್ಟ ಹೇಳಿಕೊಂಡಿದ್ದರು.

ADVERTISEMENT

ತಕ್ಷಣವೇ ಕಾರ್ಯಪೃವೃತ್ತರಾದ ಝಾನ್ಸಿ ಆರ್‌ಪಿಎಫ್ ಪೊಲೀಸರು, ರೈಲ್ವೆ ಸಿಬ್ಬಂದಿ ಹಾಗೂ ಉತ್ತರ ಪ್ರದೇಶದ ಜಿಆರ್‌ಪಿ ಪೊಲೀಸರು 16 ಕಿ.ಮೀ ಕಾಲ್ನಡಿಗೆ ಮೂಲಕ ಟಾರ್ಚ್ ಬಳಸಿ ಹುಡುಕಾಟ ನಡೆಸಿದ್ದರು. ಲಲಿತಪುರ ಬಳಿ ಗಾಯಗೊಂಡು ಬಿದ್ದಿದ್ದ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೂಡಲೇ ಪೊಲೀಸರು ಲಲಿತಪುರಕ್ಕೆ ಬಾಲಕಿಯನ್ನು ಕೊಂಡೊಯ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಬಾಲಕಿ ಪೋಷಕರ ಮಡಿಲು ಸೇರಿದ್ದಾಳೆ.

ಸಂಕಷ್ಟ ತಿಳಿದು ನಾವೆಲ್ಲ ಒಂದು ತಂಡವಾಗಿ ಚುರುಕಾಗಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದು ಉತ್ತರ ಪ್ರದೇಶ ಪೊಲೀಸ್ ಎಕ್ಸ್ ತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.