ADVERTISEMENT

ದೆಹಲಿ: ಈ ವರ್ಷ 6 ತಿಂಗಳ ಅಗ್ನಿ ಅವಘಡಗಳಲ್ಲಿ 83 ಮಂದಿ ಸಾವು

ಪಿಟಿಐ
Published 25 ಜೂನ್ 2024, 15:53 IST
Last Updated 25 ಜೂನ್ 2024, 15:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ವರ್ಷದ ಮೊದಲ 6 ತಿಂಗಳಿನಲ್ಲಿ ಸಂಭವಿಸಿರುವ ಅಗ್ನಿ ಅವಘಡಗಳಲ್ಲಿ 83 ಮಂದಿ ಮೃತಪಟ್ಟು, 390ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಅಂಕಿಅಂಶದಿಂದ ತಿಳಿದುಬಂದಿದೆ.

ದೆಹಲಿ ಅಗ್ನಿಶಾಮಕ ಸೇವೆ(ಡಿಎಫ್‌ಎಸ್) ಅಂಕಿ ಅಂಶದ ಪ್ರಕಾರ, ಜನವರಿ ಮತ್ತು ಫೆಬ್ರುವರಿಯಲ್ಲಿ ಸಂಭವಿಸಿದ ಅಗ್ನಿ ಅವಘಡಗಳಲ್ಲಿ ತಲಾ 16 ಮಂದಿ, ಮಾರ್ಚ್‌ನಲ್ಲಿ 12 ಮಂದಿ, ಏಪ್ರಿಲ್‌ನಲ್ಲಿ ನಾಲ್ವರು, ಮೇನಲ್ಲಿ 7 ಮಂದಿ ಮತ್ತು ಜೂನ್ 24ರವರೆಗೆ 24 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ದೆಹಲಿಯ ದ್ವಾರಕಾದ ಛವಾಲಾ ಪ್ರದೇಶದಲ್ಲಿ ಇಂದು ಒಂದೇ ಕುಟುಂಬದ 4 ಮಂದಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.

ಜನವರಿ ತಿಂಗಳಲ್ಲಿ ಅಗ್ನಿ ಅವಘಡದಲ್ಲಿ 51 ಮಂದಿ, ಫೆಬ್ರುವರಿಯಲ್ಲಿ 42, ಮಾರ್ಚ್‌ನಲ್ಲಿ 62, ಏಪ್ರಿಲ್‌ನಲ್ಲಿ 78, ಮೇನಲ್ಲಿ 84 ಮತ್ತು ಜೂನ್ 24ರವರೆಗೆ 77 ಮಂದಿ ಗಾಯಗೊಂಡಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ 39 ಮಂದಿ ಅಗ್ನಿ ಅವಘಡದಲ್ಲಿ ಜೀವ ಕಳೆದುಕೊಂಡಿದ್ದರು.

‘ಅಗ್ನಿಶಾಮಕ ಕೇಂದ್ರಕ್ಕೆ ಅಗ್ನಿ ಅವಘಡಗಳ ಕುರಿತಂತೆ ಬರುತ್ತಿರುವ ಕರೆಗಳ ಸಂಖ್ಯೆ ಸಹ ಈ ವರ್ಷ ಶೇ 48ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಜನವರಿ 1ರಿಂದ 24ರವರೆಗೆ ಅಗ್ನಿ ಅವಘಡ ಸಂಬಂಧಿತ 7,774 ಕರೆಗಳು ಬಂದಿದ್ದವು. ಇದೇ ಅವಧಿಯಲ್ಲಿ ಈ ವರ್ಷ 12,687 ಕರೆಗಳು ಬಂದಿವೆ’ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಂಕಿಅಂಶದಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.