ADVERTISEMENT

ತೆಲಂಗಾಣದಲ್ಲಿ ಜಾತಿ ಗಣತಿ ಶೇ 92ರಷ್ಟು ಪೂರ್ಣ: ಸಿಎಂ ರೇವಂತ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:47 IST
Last Updated 26 ನವೆಂಬರ್ 2024, 13:47 IST
<div class="paragraphs"><p>ರೇವಂತ್ ರೆಡ್ಡಿ</p></div>

ರೇವಂತ್ ರೆಡ್ಡಿ

   

ನವದೆಹಲಿ: 'ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ಬದ್ಧವಾಗಿದ್ದು, ರಾಜ್ಯದಲ್ಲಿ ಜಾತಿ ಗಣತಿ ಶೇ 92ರಷ್ಟು ಪೂರ್ಣಗೊಂಡಿದೆ' ಎಂದು ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಇಂದು (ಮಂಗಳವಾರ) ತಿಳಿಸಿದರು.

'ಸಂವಿಧಾನ ರಕ್ಷಕ್ ಅಭಿಯಾನ' ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಮೂಲಕ ಬಡವರಿಗೆ ಮೀಸಲಾತಿ ನೀಡಲಾಗಿದೆ. ಜನರಿಗೆ ಮತದಾನದ ಹಕ್ಕು ದೊರಕಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಹಕ್ಕುಗಳು ಲಭಿಸಿವೆ' ಎಂದು ಪ್ರತಿಪಾದಿಸಿದರು.

ADVERTISEMENT

'ಇವೆಲ್ಲವೂ ಪಂಡಿತ್ ಜವಾಹರಲಾಲ್ ನೆಹರೂ, ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಇಂದಿರಾಗಾಂಧಿ ಅವರಿಂದಾಗಿ ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಬಡವರಿಗಾಗಿ ಕೃಷಿ ಕಾಯ್ದೆಯನ್ನು ರೂಪಿಸಿದರು. ಬಡವರಿಗೂ ಭೂಮಿ ನೀಡುವ ಮೂಲಕ ಅವರ ಗೌರವವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು' ಎಂದು ಹೇಳಿದರು.

'ಮುಂದಿನ ಹಂತದ ಸಾಮಾಜಿಕ ನ್ಯಾಯ ರಾಜೀವ್ ಗಾಂಧಿ ಅವರಿಂದ ಪಿ.ವಿ ನರಸಿಂಹ ರಾವ್ ವರೆಗಿನ ಕಾಲಘಟ್ಟದಲ್ಲಿ ಖಾತ್ರಿಪಡಿಸಲಾಯಿತು' ಎಂದು ಅವರು ಉಲ್ಲೇಖಿಸಿದರು.

'ಈ ಹಾದಿಯಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಹುಲ್ ಗಾಂಧಿ ತೆಲಂಗಾಣದಲ್ಲಿ ಜಾತಿ ಗಣತಿಯ ಭರವಸೆ ನೀಡಿದರು. ರಾಜ್ಯದಲ್ಲಿ ಜಾತಿ ಗಣತಿ ಶೇ 92ರಷ್ಟು ಪೂರ್ಣಗೊಂಡಿದೆ' ಎಂದು ಅವರು ಹೇಳಿದರು.

'ನಾವು ಸಾಮಾಜಿಕ ನ್ಯಾಯದ ಕೆಲಸವನ್ನು ಈಡೇರಿಸುತ್ತಿದ್ದೇವೆ. ಏಕೆಂದರೆ ಜನರಿಗೆ ಅವರ ಹಕ್ಕುಗಳನ್ನು ನೀಡುವುದು ಅವಶ್ಯಕವಾಗಿದೆ' ಎಂದು ಹೇಳಿದರು.

'ದೇಶದಲ್ಲಿ ಎರಡು ಕುಟುಂಬಗಳಿವೆ. ಮೊದಲನೆಯದ್ದು ಪ್ರಧಾನಿ ನರೇಂದ್ರ ಮೋದಿಯವರ ಕುಟುಂಬ ಸಂವಿಧಾನದ ನಾಶ ಮಾಡುವಲ್ಲಿ ತೊಡಗಿದೆ. ಎರಡನೇಯದ್ದು ರಾಹುಲ್ ಗಾಂಧಿಯವರ ಕುಟುಂಬ ಸಂವಿಧಾನದ ರಕ್ಷಣೆಯಲ್ಲಿ ತೊಡಗಿದೆ' ಎಂದು ಹೇಳಿದರು.

'ಸಂವಿಧಾನ ರಕ್ಷಿಸುವ ಕೆಲಸ ಕೇವಲ ರಾಹುಲ್ ಗಾಂಧಿ ಅವರಿಗೆ ಮಾತ್ರ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಹೋರಾಡಬೇಕು' ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.