ADVERTISEMENT

ಹರಿಯಾಣ ವಿಧಾನಸಭೆ | ಶೇ 96ರಷ್ಟು ಶಾಸಕರು ಕೋಟ್ಯಧಿಪತಿಗಳು: ADR

ಪಿಟಿಐ
Published 10 ಅಕ್ಟೋಬರ್ 2024, 10:10 IST
Last Updated 10 ಅಕ್ಟೋಬರ್ 2024, 10:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಆಯ್ಕೆಯಾದ ಶೇ 96 ರಷ್ಟು ಶಾಸಕರು ಕೋಟ್ಯಧಿಪತಿಗಳು ಹಾಗೂ ಶೇ 13 ರಷ್ಟು ಶಾಸಕರು ಅಪರಾಧ ಹಿನ್ನಲೆಯುಳ್ಳವರು ಎಂದು ಎಡಿಆರ್‌ ವರದಿ ತಿಳಿಸಿದೆ.

ಅಂದರೆ 86 ಶಾಸಕರು ಕೋಟ್ಯಧಿಪತಿಗಳು, 12 ಶಾಸಕರಿಗೆ ಅಪರಾಧ ಹಿನ್ನೆಲೆಯಿದೆ.

ADVERTISEMENT

2019ರಲ್ಲಿ ಶೇ 93 ರಷ್ಟು ಶಾಸಕರು ಕೋಟ್ಯಧಿಪತಿಗಳಾಗಿದ್ದರು ಈ ಬಾರಿ ಮೂರು ಪ್ರತಿಶತದಷ್ಟು ಹೆಚ್ಚಳವಾಗಿ ಶೇ 96 ರಷ್ಟು ಶಾಸಕರು ಕೋಟ್ಯಾಧಿಪತಿಗಳಗಿದ್ದಾರೆ. 

90 ಶಾಸಕರಲ್ಲಿ ಶೇ 44 ರಷ್ಟು ಶಾಸಕರ ಆಸ್ತಿ ಮೌಲ್ಯ ಸರಾಸರಿ ₹10 ಕೋಟಿ, ಶೇ 2.2 ರಷ್ಟು ಶಾಸಕರು ಮಾತ್ರ ₹20 ಲಕ್ಷಕ್ಕಿಂತ ಕಡಿಮೆ ಆಸ್ತಿಯನ್ನು ಹೊಂದಿದ್ದಾರೆ ಅಂಕಿ ಅಂಶ ತಿಳಿಸಿದೆ. 

ಪಕ್ಷಗಳ ಆಯಾಮದಿಂದ ನೋಡುವುದಾದರೆ ಗೆಲುವು ಸಾಧಿಸಿದ ಶೇ 96 ರಷ್ಟು ಬಿಜೆಪಿ ಶಾಸಕರು, ಶೇ 95 ರಷ್ಟು ಕಾಂಗ್ರೆಸ್‌ ಶಾಸಕರು ಮತ್ತು ಶೇ 100ರಷ್ಟು ಐಎನ್‌ಎಲ್‌ಡಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಾವು ₹1 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಅವರಲ್ಲಿ ಹಿಸ್ಸಾರ್‌ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸಾವಿತ್ರಿ ಜಿಂದಾಲ್‌ ಅವರು ಅತಿ ಹೆಚ್ಚು, ಅಂದರೆ ₹270 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

 ಲಭ್ಯವಿರುವ ಅಪರಾಧ ದಾಖಲೆಗಳಲ್ಲಿ 12 ಶಾಸಕರು ಆರು ಗಂಭೀರ ಪ್ರಕರಣಗಳು, ಒಂದು ಕೊಲೆಗೆ ಯತ್ನ ಆರೋಪಗಳನ್ನು ಎದುರಿಸುತ್ತಿರುವುದಾಗಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.