ಅಯೋಧ್ಯೆ (ಉತ್ತರ ಪ್ರದೇಶ): ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ 98 ವರ್ಷದ ವೃದ್ಧರೊಬ್ಬರು ಅಯೋಧ್ಯೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ಅವರಿಗೆ ಜೈಲು ಸಿಬ್ಬಂದಿ ಬೀಳ್ಕೊಡುಗೆ ನೀಡಿರುವ ಸಂಗತಿ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ.
ಅಯೋಧ್ಯೆಯ ವಯೋವೃದ್ಧ ರಾಮ್ ಸೂರತ್ ಎಂಬುವರು ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಕಳೆದ ಐದು ವರ್ಷದ ಹಿಂದೆ ಜೈಲು ಸೇರಿದ್ದರು. ಇದೀಗ ಜೈಲು ಶಿಕ್ಷೆಯನ್ನು ಪೂರೈಸಿರುವ ಅವರು ಇತ್ತೀಚೆಗೆ ಬಿಡುಗಡೆಯಾದರು.
ಈ ವೇಳೆ ಜೈಲು ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರು ರಾಮ್ ಅವರಿಗೆ ಬೆಂಗಾವಲು ನೀಡಿ (ಎಸ್ಕಾರ್ಟ್) ಮನೆಗೆ ತಲುಪಿಸಿದ್ದಾರೆ. ಇದೇ ವೇಳೆ ರಾಮ್ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ. ಈ ವಿಡಿಯೊವನ್ನು ಉತ್ತರಪ್ರದೇಶದ ಕಾರಾಗೃಹ ಇಲಾಖೆ ಡಿಜಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ರಾಮ್ ಸೂರತ್ ಐಪಿಸಿ ಸೆಕ್ಷನ್ 452, 323, 352 ಅಡಿ ಶಿಕ್ಷೆಗೊಳಗಾಗಿದ್ದರು. ಬಿಡುಗಡೆ ವೇಳೆ ರಾಮ್ ಸೂರತ್ ಅವರ ಯಾವುದೇ ಸಂಬಂಧಿಗಳು ಹಾಜರಿರಲಿಲ್ಲ’ ಎಂದು ಶಶಿಕಾಂತ್ ಮಿಶ್ರಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.