ADVERTISEMENT

ಉತ್ತರಪ್ರದೇಶ: ಮೂತ್ರ ಕುಡಿಸಿ ದಲಿತ ವೃದ್ಧನ ಮೇಲೆ ಹಲ್ಲೆ

ಏಜೆನ್ಸೀಸ್
Published 13 ಅಕ್ಟೋಬರ್ 2020, 7:25 IST
Last Updated 13 ಅಕ್ಟೋಬರ್ 2020, 7:25 IST
ಹಲ್ಲೆಗೊಳಗಾದ ವ್ಯಕ್ತಿ
ಹಲ್ಲೆಗೊಳಗಾದ ವ್ಯಕ್ತಿ   

ಲಲಿತ್ ಪುರ (ಉತ್ತರಪ್ರದೇಶ): ಇಲ್ಲಿನ ರೋಡ ಗ್ರಾಮದಲ್ಲಿ 65 ವರ್ಷದ ದಲಿತ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಅವರಿಗೆ ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ವರದಿಯಾಗಿದೆ.

ಸೋನು ಯಾದವ್‌ ಎನ್ನುವವವೃದ್ಧ ವ್ಯಕ್ತಿಗೆ ಮೂತ್ರ ಕೂಡಿಸಿ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ದಿನಗಳ ಹಿಂದೆ ಸೋನು ಯಾದವ್‌ ವೃದ್ಧ ವ್ಯಕ್ತಿಯ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸೋನು ಯಾದವ್‌ ಆ ಕುಟುಂಬದವರಿಗೆ ದೂರು ವಾಪಾಸು ಪಡೆಯುವಂತೆ ಒತ್ತಡ ಹಾಕಿದ್ದ.

ADVERTISEMENT

ಸೋನು ಯಾದವ್‌ ಬೆದರಿಕೆ ಹಾಗೂ ಒತ್ತಡಕ್ಕೆ ಮಣಿಯದಿದ್ದಾಗ ಬಲವಂತವಾಗಿ ಮೂತ್ರ ಕುಡಿಸಿ, ಕಟ್ಟಿಗೆಯಿಂದ ಹಲ್ಲೆ ಮಾಡಲಾಯಿತುಎಂದು ವೃದ್ಧ ವ್ಯಕ್ತಿ ತಿಳಿಸಿದ್ದಾರೆ.

ರೋಡ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಗಳು ಇಬ್ಬರು ದಲಿತರ ಮೇಲೆ ಹಲ್ಲೆ ಮಾಡಿರುವುದು ತಿಳಿದುಬಂದಿದೆ. ಈಗಾಗಲೇ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದವರ ಪತ್ತಗೆ ಕ್ರಮಕೈಗೊಳ್ಳಲಾಗಿದೆ. ನಾವು ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಲಲಿತ್‌ಪುರದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮಿರ್ಜಾ ಬೇಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.