ADVERTISEMENT

Video: ರಾಮ ಮಂದಿರದ ಪರಿಕಲ್ಪನೆಯಲ್ಲಿ ವಜ್ರದ ಹಾರ ತಯಾರಿಸಿದ ಗುಜರಾತ್ ವ್ಯಾಪಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2023, 3:37 IST
Last Updated 19 ಡಿಸೆಂಬರ್ 2023, 3:37 IST
<div class="paragraphs"><p>ಎಎನ್‌ಐ ವಿಡಿಯೊ ಸ್ಕ್ರೀನ್‌ಗ್ರ್ಯಾಬ್</p></div>

ಎಎನ್‌ಐ ವಿಡಿಯೊ ಸ್ಕ್ರೀನ್‌ಗ್ರ್ಯಾಬ್

   

ಸೂರತ್: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದು, ರಾಮ ಭಕ್ತರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಗುಜರಾತ್‌ ರಾಜ್ಯದ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ರಾಮ ಮಂದಿರದ ಪರಿಕಲ್ಪನೆಯಲ್ಲಿ ವಜ್ರದ ಹಾರವನ್ನು ತಯಾರಿಸಿದ್ದಾರೆ. ಈ ಸಂಪೂರ್ಣ ವಿನ್ಯಾಸದಲ್ಲಿ ಅಮೆರಿಕದ 5,000 ವಜ್ರಗಳನ್ನು ಬಳಸಲಾಗಿದೆ.

ADVERTISEMENT

ವಜ್ರದ ಹಾರದಲ್ಲಿ 2 ಕೆಜಿ ಬೆಳ್ಳಿಯನ್ನು ಸಹ ಬಳಕೆ ಮಾಡಲಾಗಿದ್ದು, 40 ಕುಶಲಕರ್ಮಿಗಳು 35 ದಿನಗಳಲ್ಲಿ ತಯಾರಿಸಿದ್ದಾರೆ.

‘ಈ ಹಾರವು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ, ನಾವು ಅದನ್ನು ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸಿದ್ದೇವೆ’ ಎಂದು ವ್ಯಾಪಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.