ADVERTISEMENT

ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಿಂದ 25 ಹುಲಿಗಳು ನಾಪತ್ತೆ

ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ವ್ಯಾಘ್ರಗಳು ಕಾಣೆ

ಪಿಟಿಐ
Published 6 ನವೆಂಬರ್ 2024, 14:15 IST
Last Updated 6 ನವೆಂಬರ್ 2024, 14:15 IST
<div class="paragraphs"><p>ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳು&nbsp; ಪಿಟಿಐ ಚಿತ್ರ&nbsp; </p></div>

ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳು  ಪಿಟಿಐ ಚಿತ್ರ 

   

ಜೈಪುರ: ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿನ (ಆರ್‌ಎನ್‌ಪಿ) 75 ಹುಲಿಗಳ ಪೈಕಿ 25 ಹುಲಿಗಳು ಕಳೆದ ಒಂದು ವರ್ಷ ಅವಧಿಯಲ್ಲಿ ಕಾಣೆಯಾಗಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ವನ್ಯಜೀವಿ ಅಧಿಕಾರಿ ಪವನ್‌ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.

‘ಇವುಗಳ ಪೈಕಿ, 11 ಹುಲಿಗಳು ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಾಪತ್ತೆಯಾಗಿವೆ’ ಎಂದು ತನಿಖೆ ಕುರಿತು ಹೊರಡಿಸಿರುವ ಆದೇಶದಲ್ಲಿ ಪವನ್‌ಕುಮಾರ್‌ ಉಪಾಧ್ಯಾಯ ಹೇಳಿದ್ದಾರೆ.

ADVERTISEMENT

ವ್ಯಾಘ್ರಗಳನ್ನು ಪತ್ತೆ ಹಚ್ಚುವುದಕ್ಕಾಗಿ ವನ್ಯಜೀವಿ ಇಲಾಖೆಯು ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ದಾಖಲೆಗಳ ಪರಿಶೀಲನೆ ಜೊತೆಗೆ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಕುರಿತು ಶಿಫಾರಸು ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ವರ್ಷದ ಮೇ 17 ಮತ್ತು ಸೆಪ್ಟೆಂಬರ್ 30 ನಡುವೆ ನಾಪತ್ತೆಯಾಗಿರುವ ಹುಲಿಗಳ ಪತ್ತೆಗೆ ಮೊದಲು ಗಮನ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ, ಒಂದು ವರ್ಷದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹುಲಿಗಳು ಅಧಿಕೃತವಾಗಿ ನಾಪತ್ತೆಯಾಗಿವೆ. ಈ ಹಿಂದೆ, ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ 2019 ರಿಂದ 2022ರ ವರೆಗೆ 13 ಹುಲಿಗಳು ನಾಪತ್ತೆಯಾಗಿದ್ದಾಗಿ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.