ADVERTISEMENT

ಭಾರತೀಯ ಸಿಖ್ಖರು ಖಲಿಸ್ತಾನಿಗಳನ್ನು ಬೆಂಬಲಿಸಲ್ಲ: ಹಿಂದೂ ಸಿಖ್ ಗ್ಲೋಬಲ್ ಫೋರಂ

ಏಜೆನ್ಸೀಸ್
Published 10 ನವೆಂಬರ್ 2024, 10:41 IST
Last Updated 10 ನವೆಂಬರ್ 2024, 10:41 IST
<div class="paragraphs"><p>ಕೆನಡಾದಲ್ಲಿನ ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ಹಿಂದೂ ಸಿಖ್ ಗ್ಲೋಬಲ್ ಫೋರಂನ ಸದಸ್ಯರು&nbsp;ದೆಹಲಿಯಲ್ಲಿ&nbsp;ಭಾನುವಾರ ಪ್ರತಿಭಟನೆ ನಡೆಸಿದರು.</p></div>

ಕೆನಡಾದಲ್ಲಿನ ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ಹಿಂದೂ ಸಿಖ್ ಗ್ಲೋಬಲ್ ಫೋರಂನ ಸದಸ್ಯರು ದೆಹಲಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

   

(ಪಿಟಿಐ ಚಿತ್ರ)

ನವದೆಹಲಿ: 'ಭಾರತೀಯ ಸಿಖ್ಖರು ಯಾವಾಗಲೂ ದೇಶದ (ಭಾರತ) ಪರವಾಗಿ ನಿಲ್ಲುತ್ತಾರೆ. ಅವರು ಎಂದಿಗೂ ಖಲಿಸ್ತಾನಿಗಳನ್ನು ಬೆಂಬಲಿಸುವುದಿಲ್ಲ' ಎಂದು ಸಿಖ್ ಗ್ಲೋಬಲ್ ಫೋರಂನ ಅಧ್ಯಕ್ಷ ತರ್ವಿಂದರ್ ಸಿಂಗ್ ಮರ್ವಾಹ್ ಹೇಳಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಮರ್ವಾಹ್, ನಿಜವಾದ ಸಿಖ್ಖರು ಎಂದಿಗೂ ಖಲಿಸ್ತಾನಿಯಾಗಲು ಸಾಧ್ಯವಿಲ್ಲ. ಖಲಿಸ್ತಾನಿ ಉಗ್ರವಾದದಿಂದ ಇಡೀ ಪೀಳಿಗೆಯೇ ನಾಶವಾಗಿತ್ತು, ಹಲವರು ಹತ್ಯೆಗೀಡಾದರೆ, ಇನ್ನೂ ಕೆಲವರು ಬೇರೆ ದೇಶಗಳಿಗೆ ವಲಸೆ ಹೋಗಿದ್ದರು. ನಂತರ ನಮ್ಮ ಯುವ ಪೀಳಿಗೆಯ ಜೀವನವನ್ನು ಹಾಳುಮಾಡಲು ಮಾದಕ ದ್ರವ್ಯಗಳನ್ನು ಪರಿಚಯಿಸಿದರು. ಪಂಜಾಬ್ ಅಭಿವೃದ್ಧಿ ಹೊಂದುತ್ತಿರುವುದನ್ನು ಕಂಡಾಗ ಅವರು ಧಾರ್ಮಿಕ ಮತಾಂತರವನ್ನು ಪ್ರಾರಂಭಿಸಿದರು. ಈಗ ದೇವಸ್ಥಾನಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ತ್ರಿವರ್ಣ ಧ್ವಜ ಮತ್ತು ನಮ್ಮ ದೇಶವನ್ನು ಗೌರವಿಸಬೇಕೆಂದು ನಾವು ಯಾವಗಲೂ ಬಯಸುತ್ತೇವೆ ಎಂದೂ ಮರ್ವಾಹ್ ಹೇಳಿದ್ದಾರೆ.

ಹಿಂದೂ ದೇವಾಲಯದ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ:

ಕೆನಡಾದಲ್ಲಿನ ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ಹಿಂದೂ ಸಿಖ್ ಗ್ಲೋಬಲ್ ಫೋರಂನ ಸದಸ್ಯರು ದೆಹಲಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ಭದ್ರತಾ ಪಡೆಗಳು ಅವರನ್ನು ತಡೆದಿದ್ದಾರೆ.

ನವೆಂಬರ್ 3ರಂದು ಖಾಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂಸಭಾ ದೇವಾಲಯದ ಆವರಣದೊಳಗೆ ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿದ್ದರು. ಇದನ್ನು ಭಾರತದ ಹೈಕಮಿಷನ್‌ ಮತ್ತು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.