ನವದೆಹಲಿ: ನೇಪಾಳ ಮತ್ತು ಭೂತಾನ್‍ಗೆ ಪ್ರವಾಸ ಕೈಗೊಳ್ಳುವವರುದಾಖಲೆ ಪತ್ರವಾಗಿ ಇನ್ನು ಮುಂದೆ ಆಧಾರ್ ಕಾರ್ಡ್ ಬಳಸಬಹುದಾಗಿದೆ.15 ವರ್ಷಕ್ಕಿಂತ ಕಿರಿಯರು ಮತ್ತು65 ವರ್ಷಕ್ಕಿಂತ ಮೇಲ್ಪಟ್ಟವರು ಈ ದೇಶಗಳಿಗೆ ಪ್ರಯಾಣ ಮಾಡುವುದಾದರೆ ಪ್ರವಾಸ ದಾಖಲೆ ಪತ್ರವಾಗಿಆಧಾರ್ ಕಾರ್ಡ್ ಬಳಕೆ ಮಾಡಬಹುದು ಎಂದು ಗೃಹ ಸಚಿವಾಲಯ ಹೇಳಿದೆ.
ಅದೇ ವೇಳೆ ಈ ಎರಡು ಪ್ರಾಯ ಮಿತಿಗಳ ನಡುವೆ ಇರುವವರು ಆಧಾರ್ ಕಾರ್ಡ್ನ್ನು ಪ್ರಯಾಣ ದಾಖಲೆ ಪತ್ರವಾಗಿ ಬಳಸುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತೀಯರು ಭೂತಾನ್ ಮತ್ತು ನೇಪಾಳಕ್ಕೆ ಪ್ರಯಾಣ ಮಾಡುವುದಾದರೆ ವೀಸಾ ಅಗತ್ಯಲಿಲ್ಲ.ಪಾಸ್‍ಪೋರ್ಟ್ ಮತ್ತು ಚುನಾವಣಾ ಗುರುತಿನ ಚೀಟಿ/ ಭಾರತ ಸರ್ಕಾರ ಮಾನ್ಯತೆ ಇರುವ ಫೋಟೊ ಲಗತ್ತಿಸಿದ ಗುರುತಿನ ಚೀಟಿ ಇದ್ದರೆಆ ಎರಡು ದೇಶಗಳಿಗೆ ಭಾರತೀಯರು ಪ್ರವಾಸ ಕೈಗೊಳ್ಳಬಹುದಾಗಿದೆ.
ಪ್ರವಾಸ ದಾಖಲೆಪತ್ರವಾಗಿಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರ್ಕಾರದ ಹೆಲ್ತ್ ಸರ್ವೀಸ್ ಕಾರ್ಡ್ ಮೊದಲಾದ ಗುರುತಿನ ಚೀಟಿಗಳ ಜತೆಗೆ ಇನ್ನು ಮುಂದೆ ಆಧಾರ್ ಕಾರ್ಡ್ ಕೂಡಾ ಗುರುತಿನ ಚೀಟಿಯಾಗಿ ಇಲ್ಲಿ ಪರಿಗಣಿಸಲ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.