ADVERTISEMENT

‘ಆಧಾರ್‌: 10 ವರ್ಷಗಳ ಹಿಂದೆ ಸಲ್ಲಿಸಿದ್ದ ದಾಖಲೆ ನವೀಕರಿಸಿ’

ಪಿಟಿಐ
Published 24 ಡಿಸೆಂಬರ್ 2022, 15:46 IST
Last Updated 24 ಡಿಸೆಂಬರ್ 2022, 15:46 IST

ನವದೆಹಲಿ (‍ಪಿಟಿಐ): ‘10 ವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ ಪಡೆದಿದ್ದವರು ಹಾಗೂ ಈವರೆಗೂ ದಾಖಲೆಗಳನ್ನು ನವೀಕರಿಸದೇ ಇರುವವರು ಶೀಘ್ರವೇ ತಮ್ಮ ಮಾಹಿತಿಯನ್ನು ನವೀಕರಣ ಮಾಡಿಕೊಳ್ಳಬೇಕು’ ಎಂದುಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಆಧಾರ್‌ ಬಳಕೆದಾರರಿಗೆ ಶನಿವಾರ ಸೂಚಿಸಿದೆ.

‘ಬಳಕೆದಾರರು ‘ಮೈ ಆಧಾರ್‌’ ಪೋರ್ಟಲ್‌ನಲ್ಲಿ ಗುರುತಿನ ಚೀಟಿ ಮತ್ತು ವಿಳಾಸ ದೃಢೀಕರಣ ಪತ್ರವನ್ನು ಅಪ್ಲೋಡ್‌ ಮಾಡುವ ಮೂಲಕ ತಮ್ಮ ಮಾಹಿತಿಯನ್ನು ನವೀಕರಿಸಬಹುದು. ಇಲ್ಲವೇ ಹತ್ತಿರದ ಆಧಾರ್‌ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು’ ಎಂದುಯುಐಡಿಎಐ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT