ADVERTISEMENT

ಮಹಾರಾಷ್ಟ್ರ | ಆದಿತ್ಯ ಠಾಕ್ರೆಗೆ ಶಿವಸೇನಾ (UBT) ಶಾಸಕಾಂಗ ಪಕ್ಷದ ನಾಯಕ ಸ್ಥಾನ

ಪಿಟಿಐ
Published 25 ನವೆಂಬರ್ 2024, 10:14 IST
Last Updated 25 ನವೆಂಬರ್ 2024, 10:14 IST
<div class="paragraphs"><p>ಆದಿತ್ಯ ಠಾಕ್ರೆ</p></div>

ಆದಿತ್ಯ ಠಾಕ್ರೆ

   

ಎಕ್ಸ್ ಚಿತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ (ಯುಬಿಟಿ) ಶಾಸಕಾಂಗ ಪಕ್ಷದ ನಾಯಕರಾಗಿ ಆದಿತ್ಯ ಠಾಕ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ADVERTISEMENT

ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವರ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆದಿತ್ಯ ಅವರು ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷದ ಮುಖಂಡ ಮಿಲಿಂದ ದೇವೋರಾ ಅವರನ್ನು 8,801 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. 2019ರಲ್ಲಿ ಆದಿತ್ಯ ಅವರ ಗೆಲುವಿನ ಅಂತರ 67,427 ಮತಗಳಾಗಿದ್ದವು. ಈ ಬಾರಿ ಅದು ಗಣನೀಯ ಕುಸಿತ ಕಂಡಿದೆ.

ಮಾಜಿ ಸಚಿವ ಅಂಬದಾಸ್ ದನ್ವೆ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ಸಮೂಹ ನಾಯಕ ಹಾಗೂ ಸುನೀಲ್ ಪ್ರಭು ಅವರನ್ನು ಮುಖ್ಯ ವಿಪ್‌ ನಾಯಕರಾಗಿ ಆಯ್ಕೆಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.