ಸುಲ್ತಾನ್‌ಪುರ: 2001ರ ಪ್ರಕರಣ ಸಂಬಂಧ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಸುಲ್ತಾನ್‌ಪುರದ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಶರಣಾದರು. ಬಳಿಕ ಅವರಿಗೆ ನ್ಯಾಯಾಲಯ ಜಾಮೀನು ನೀಡಿತು.
‘ಸಂಜಯ್ ಸಿಂಗ್ ಅವರು ಸುಲ್ತಾನ್‌ಪುರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶರಣಾದರು. ಭದ್ರತೆಯಾಗಿ ₹ 50 ಸಾವಿರದ ಬಾಂಡ್ ಒದಗಿಸಬೇಕು ಎನ್ನುವ ಷರತ್ತಿನೊಂದಿಗೆ ಕೋರ್ಟ್ ಜಾಮೀನು ನೀಡಿತು’ ಎಂದು ಅವರ ವಕೀಲ ಮದನ್ ಸಿಂಗ್ ತಿಳಿಸಿದರು.
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಸಂಚಾರಕ್ಕೆ ಅಡ್ಡಿ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಅರೋಪದಡಿ ಸಂಜಯ್ ಸಿಂಗ್ ಅವರಿಗೆ ಜನವರಿ 11 ರಂದು ವಿಶೇಷ ಕೋರ್ಟ್ 3 ತಿಂಗಳ ಕಠಿಣ ಸಜೆ ವಿಧಿಸಿತ್ತು.
ಸುಲ್ತಾನ್‌ಪುರ ಕೋರ್ಟ್ ನೀಡಿದ ಶಿಕ್ಷೆಗೆ ಆಗಸ್ಟ್ 22 ರಂದು ಅಲಹಾಬಾದ್ ಹೈಕೋರ್ಟ್ ತಡೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.