ADVERTISEMENT

ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಜಾಮೀನು ಅವಧಿ ಡಿ.4ರವರೆಗೆ ವಿಸ್ತರಣೆ

ಪಿಟಿಐ
Published 24 ನವೆಂಬರ್ 2023, 7:16 IST
Last Updated 24 ನವೆಂಬರ್ 2023, 7:16 IST
<div class="paragraphs"><p>ದೆಹಲಿ ಮಾಜಿ ಸತ್ಯೇಂದ್ರ ಜೈನ್‌</p></div>

ದೆಹಲಿ ಮಾಜಿ ಸತ್ಯೇಂದ್ರ ಜೈನ್‌

   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರದಲ್ಲಿ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಡಿ. 4ರವರೆಗೆ ವಿಸ್ತರಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ ಅವರು ಇಂದು ಗೈರಾಗಿದ್ದರಿಂದ ನ್ಯಾಯಮೂರ್ತಿ ಬೇಳಾ ಎಂ. ತ್ರಿವೇದಿ ಅವರು ‍ಪ್ರಕರಣದ ವಿಚಾರಣೆಯನ್ನು ಡಿ. 4ಕ್ಕೆ ಮುಂದೂಡಿದರು.

ADVERTISEMENT

ಪ್ರಕರಣದಲ್ಲಿ ನೀಡಲಾಗಿರುವ ಮಧ್ಯಂತರ ಜಾಮೀನನ್ನು ಮುಂದಿನ ವಿಚಾರಣೆಯವರೆಗೂ ವಿಸ್ತರಿಸಲಾಗಿದೆ ಎಂದು ಪೀಠವು ಹೇಳಿತು.

ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಾಗಿ ಸತ್ಯೇಂದ್ರ ಜೈನ್ ಅವರಿಗೆ, ಸುಪ್ರೀಂ ಕೋರ್ಟ್‌ ಮೇ 26ರಂದು ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಸೆಪ್ಟೆಂಬರ್ 12 ರಂದು ಜಾಮೀನು ಅವಧಿಯನ್ನು ಸೆಪ್ಟೆಂಬರ್ 25 ರವರೆಗೆ ವಿಸ್ತರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.