ದೆಹಲಿ: ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿ ಆಮ್ ಆದ್ಮಿ ಪಕ್ಷದಿಂದ ಇಂದು ‘ವಾಕ್ ಫಾರ್ ಕೇಜ್ರಿವಾಲ್’ ವಾಕಥಾನ್ ನಡೆಯಿತು.
‘ಎಎಪಿಯ ಯುವ ಘಟಕ ಮತ್ತು ಲೋಕಸಭಾ ಅಭ್ಯರ್ಥಿಗಳು ಜಂಟಿಯಾಗಿ ವಾಕಥಾನ್ ಅನ್ನು ಆಯೋಜಿಸಿವೆ. ದಕ್ಷಿಣ ದೆಹಲಿಯಿಂದ ನವದೆಹಲಿಯವರೆಗೆ ವಾಕಥಾನ್ ನಡೆಯಿತು’ ಎಂದು ಸಚಿವ ಸೌರಭ್ ಭಾರಾದ್ವಾಜ್ ಸುದ್ದಿಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದರು.
‘ಕೇಜ್ರಿವಾಲ್ ಬಂಧನದ ವಿರುದ್ಧ ದೆಹಲಿಯಲ್ಲಿ ‘ಜೈಲ್ ಕಾ ಜವಾಬ್ ವೋಟ್ ಸೆ’ ಎಂಬ ಅಭಿಯಾನ ನಡೆಸುತ್ತಿದ್ದೇವೆ. ಅಲ್ಲದೇ ಸ್ಥಳದಲ್ಲಿ ವಾಷಿಂಗ್ ಮಿಷನ್‌ವೊಂದನ್ನು ಇರಿಸಿದ್ದು, ಯಾವುದೇ ಭ್ರಷ್ಟ ರಾಜಕಾರಣಿಯನ್ನು ಈ ಯಂತ್ರದಲ್ಲಿ ಹಾಕಿದರೂ ಅವರು ಪರಿಶುದ್ಧವಾಗಿ ಹೊರಬರುತ್ತಾರೆ’ ಎಂದು ವ್ಯಂಗ್ಯವಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ವಿಚಲಿತರಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ತಮ್ಮ ನಿಲುವನ್ನು ಬದಲಿಸಿರುವುದನ್ನು ನೋಡಿದರೆ ವಿರೋಧ ಪಕ್ಷಗಳು ಅಧಿಕಾರಕ್ಕೆ ಬರುವುದು ಖಚಿತವೆಂದು ಅವರಿಗೆ ಅನಿಸಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.