ADVERTISEMENT

ಕೇಜ್ರಿವಾಲ್‌ಗೆ ಇ.ಡಿ ಸಮನ್ಸ್‌: ಕಾನೂನು ಸಲಹೆ ನಂತರ ನಿರ್ಧಾರ- ಎಎಪಿ

ಪಿಟಿಐ
Published 23 ಡಿಸೆಂಬರ್ 2023, 15:53 IST
Last Updated 23 ಡಿಸೆಂಬರ್ 2023, 15:53 IST
<div class="paragraphs"><p>ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌</p></div>

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌

   

ನವದೆಹಲಿ: ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಲಾಗಿರುವ ಹೊಸ ಸಮನ್ಸ್‌ ಕುರಿತು ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯುವುದಾಗಿ ಆಮ್‌ ಆದ್ಮಿ ಪಕ್ಷ (ಎಎಪಿ) ಶನಿವಾರ ತಿಳಿಸಿದೆ.

ಡಿ.21ರಂದು ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ ಅವರಿಗೆ ಇ.ಡಿ ಸಮನ್ಸ್‌ ಜಾರಿ ಮಾಡಿತ್ತು. ವಿಚಾರಣೆಗೆ ತೆರಳದ ಕೇಜ್ರಿವಾಲ್‌, ವಿಪಶ್ಶನ ದ್ಯಾನಕ್ಕೆ ಹೋಗಿದ್ದಾರೆ. ಇದರ ಬೆನ್ನಿಗೇ ಇ.ಡಿ ಶುಕ್ರವಾರ ಮತ್ತೊಮ್ಮೆ ಸಮನ್ಸ್‌ ಜಾರಿ ಮಾಡಿದ್ದು ಜ. 3ರಂದು ವಿಚಾರಣೆಗೆ ಬರಲು ಹೇಳಿದೆ. 

ADVERTISEMENT

‘ಕೇಜ್ರಿವಾಲ್‌ ವಿಪಶ್ಶನಕ್ಕೆ ತೆರಳಿದ್ದಾರೆ. ಅವರೊಂದಿಗೆ ಯಾವ ಸಂವಹನವೂ ಇಲ್ಲ. ಅವರು ಬಂದ ಕೂಡಲೇ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯಲಾಗುವುದು. ನಂತರ ಮುಂದಿನದ್ದನ್ನು ನಿರ್ಧಾರ ಮಾಡುತ್ತೇವೆ’ ಎಂದು ದೆಹಲಿಯ ಪರಿಸರ ಖಾತೆ ಸಚಿವ ಗೋಪಾಲ್‌ ರಾಯ್‌ ತಿಳಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.