ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ದಾಟುವುದಿಲ್ಲ. ಎಎಪಿ ಜೂನ್ 4 ರಂದು ಕೇಂದ್ರದಲ್ಲಿ ರಚನೆಯಾಗಲಿರುವ ಸರ್ಕಾರದ ಭಾಗವಾಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ಪ್ರತಿಪಾದಿಸಿದರು.
'ಕೇಜ್ರಿವಾಲ್ ಸರ್ವಾಧಿಕಾರದ ಶತ್ರು':
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ದಿನದ ಬಳಿಕ ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾನ್, 'ಕೇಜ್ರಿವಾಲ್ ಒಬ್ಬ ವ್ಯಕ್ತಿಯಲ್ಲ, ಆದರೆ ಚಿಂತನೆ ಎಂದು ನಾನು ಎಲ್ಲೆಡೆ ಹೇಳಿದ್ದೇನೆ. ನೀವು ಒಬ್ಬ ವ್ಯಕ್ತಿಯನ್ನು ಬಂಧಿಸಬಹುದು ಆದರೆ ಚಿಂತನೆಯನ್ನಲ್ಲ. ಅವರು (ಕೇಜ್ರಿವಾಲ್) ಸರ್ವಾಧಿಕಾರದ ಶತ್ರು' ಎಂದು ಹೇಳಿದರು.
ಸಂಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ನಿಂತ ದೆಹಲಿಯ ಜನರಿಗೆ ಮಾನ್ ಧನ್ಯವಾದ ಹೇಳಿದರು. ಅಲ್ಲದೇ ಚುನಾವಣೆಗೆ ಕೇವಲ 20 ದಿನಗಳು ಉಳಿದಿವೆ. ಹಾಗಾಗಿ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ ಎಂದರು.
ಮೊದಲ ಮೂರು ಸುತ್ತಿನ ಸಮೀಕ್ಷೆಗಳು ಬಿಜೆಪಿ 400 ಸ್ಥಾನಗಳನ್ನು ದಾಟುವುದಿಲ್ಲ ಎಂದು ಬಹಿರಂಗಪಡಿಸಿವೆ. ಮೋದಿ ಅವರು ಇ.ಡಿ, ಸಿಬಿಐ ದಾಳಿ ನಡೆಸಿ ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಮೂಲಕ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.