ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮಹೇಶ್ ಖಿಚಿ ಅವರು ಗುರುವಾರ ಗೆಲುವು ಸಾಧಿಸಿದರು.
ಖಿಚಿ ಅವರು ಬಿಜೆಪಿ ಅಭ್ಯರ್ಥಿ ಕಿಶನ್ ಲಾಲ್ ಅವರನ್ನು ಕೇವಲ ಮೂರು ಮತಗಳ ಅಂತರದಲ್ಲಿ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದರು. ಖಿಚಿ ಅವರು 133 ಮತಗಳನ್ನು ಪಡೆದರೆ, ಕಿಶನ್ ಲಾಲ್ ಅವರು 130 ಮತಗಳನ್ನು ಪಡೆದಿದ್ದಾರೆ. ಒಟ್ಟು ಚಲಾವಣೆಯಾಗಿದ್ದ 256 ಮತಗಳ ಪೈಕಿ ಎರಡು ಮತಗಳನ್ನು ಅಸಿಂಧುಗೊಳಿಸಲಾಗಿದೆ.
ಮೇಯರ್ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಬಿಜೆಪಿಯು ಉಪ ಮೇಯರ್ ಸ್ಪರ್ಧೆಯಿಂದ ಹಿಂದೆ ಸರಿಯಿತು. ಇದರಿಂದಾಗಿ ಎಎಪಿಯ ರವೀಂದ್ರ ಭಾರದ್ವಾಜ್ ಅವರಿಗೆ ಹಾದಿ ಸುಗಮವಾಯಿತು. ಭಾರದ್ವಾಜ್ ಅವರನ್ನು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತೀವ್ರ ಹಣಾಹಣಿಯ ಸ್ಪರ್ಧೆಯಲ್ಲಿ ದಲಿತ ಅಭ್ಯರ್ಥಿ ಖಿಚಿ ಅವರು ಗೆಲುವು ಸಾಧಿಸುತ್ತಿದ್ದಂತೆಯೇ ಎಎಪಿ ಕೌನ್ಸಿಲರ್‌ಗಳು ‘ಜೈ ಭೀಮ್’ ಎಂದು ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.