ನವದೆಹಲಿ: ‘ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಪ್ರಯೋಜನ ಪ್ಯಾಕೇಜ್– 2022 ಹೊಸ ಆವೃತ್ತಿಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪ್ರಾರಂಭಿಸಿದೆ. ಈಗ ಇದಕ್ಕೆ ಹೊಸದಾಗಿ 365 ಪ್ರಯೋಜನಗಳನ್ನು ಸೇರಿಸಿದ್ದು, ಯೋಜನೆಯ ಪ್ರಯೋಜನಗಳ ಸಂಖ್ಯೆ 1,949ಕ್ಕೆ ತಲುಪಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರತಿಳಿಸಿದೆ.
ಆರೋಗ್ಯ ಪ್ರಯೋಜನ ಪ್ಯಾಕೇಜ್– 2022ರೊಂದಿಗೆ ನಗರಾನುಸಾರ ಮತ್ತು ಯಾವ ಮಟ್ಟದ ಚಿಕಿತ್ಸೆ ಅಗತ್ಯವಿದೆ ಎನ್ನುವುದನ್ನು ಆಧರಿಸಿ ಚಿಕಿತ್ಸಾ ವೆಚ್ಚದ ದರ ಪರಿಚಯಿಸಲಾಗುತ್ತಿದೆ ಎಂದು ಹೇಳಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಪ್ರಗತಿ ಪರಿಶೀಲಿಸಲು ನಡೆಸಿದ ಎರಡು ದಿನಗಳ ಸಭೆಯಲ್ಲಿ ಹೊಸ ಪ್ಯಾಕೇಜ್ ಪ್ರಾರಂಭಿಸಲಾಯಿತು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.