ಕೊಚ್ಚಿ: ಒಂಟಿಯಾಗಿ ಭೂಮಿ ಸುತ್ತುವ ವೇಳೆಹಾಯಿದೋಣಿಗೆ ಹಾನಿಯಾಗಿ ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಸಿಲುಕಿರುವ ಭಾರತೀಯ ನೌಕಾಪಡೆಯ ಕಮೆಂಡರ್ ಅಭಿಲಾಷ್ ಟಾಮಿ ಅವರನ್ನು ಫ್ರೆಂಚ್ ನೌಕಾಪಡೆಯು ಸೋಮವಾರ ರಕ್ಷಿಸಿದೆ.
ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ‘ಅಭಿಲಾಷ್ ಟಾಮಿ ಸುರಕ್ಷಿತವಾಗಿದ್ದಾರೆ. ಅವರನ್ನು ಫ್ರೆಂಚ್ ಹಡಗಿನಲ್ಲಿ ಹತ್ತಿರದ ದ್ವೀಪವೊಂದಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಅವನಿಗೆ ಪ್ರಜ್ಞೆ ಬಂದಿದ್ದು, ನೀರ್ಜಲೀಕರಣದಿಂದ ಸುಸ್ತಾಗಿದ್ದಾನೆ’ ಎಂದು ಅಭಿಲಾಷ್ ಅವರ ತಂದೆ ಪಿಸಿ ಟಾಮಿ ಕೊಚ್ಚಿಯಲ್ಲಿ ತಿಳಿಸಿದರು.
ಗೋಲ್ಡನ್ ಗ್ಲೋಬ್–2018ರ ಸ್ಪರ್ಧೆಯಲ್ಲಿ ಟಾಮಿ ಅವರು ಭಾರತವನ್ನು ಪ್ರತಿನಿಧಿಸಿ ಪ್ರಪಂಚ ಸುತ್ತಿ ಬರಲು ಮುಂದಾಗಿದ್ದರು. ಇದಕ್ಕಾಗಿ ಅವರು ಬಳಸಿದ್ದ,ಸ್ಥಳೀಯವಾಗಿ ನಿರ್ಮಿತವಾಗಿದ್ದ ಹಾಯಿದೋಣಿಯು,ಬಿರುಗಾಳಿ ಹಾಗೂ ಭಾರಿ ಅಲೆಗೆ ಸಿಲುಕಿತ್ತು.ದೋಣಿಯ ಹಾಯಿಕಂಬ ಮುರಿದು ಅವರ ಬೆನ್ನಿಗೆ ತೀವ್ರ ಗಾಯವಾಗಿತ್ತು.
ಇದನ್ನೂ ಓದಿ......
ಭಾರತೀಯ ನೌಕಾಸೇನೆಯು ಆಸ್ಟ್ರೇಲಿಯಾ ನೌಕಾಪಡೆಯೊಂದಿಗೆ ಸಂಪರ್ಕದಲ್ಲಿದೆ. ‘ಇನ್ನು 16 ಗಂಟೆಯೊಳಗೆ ಗಾಯಗೊಂಡಿರುವ ಟಾಮಿ ಅವರನ್ನು ಒಸಿರಿಸ್ ಎಂಬ ಫ್ರೆಂಚ್ ಹಡಗಿನಲ್ಲಿ ಕರೆದೊಯ್ಯಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಭಾನುವಾರ ರಾತ್ರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.
2013ರಲ್ಲಿ,ಯಾರ ನೆರವು ಇಲ್ಲದೇ ನಿರಂತರವಾಗಿ ಪಯಣಿಸಬೇಕಿದ್ದ ಭೂಮಿ ಸುತ್ತುವ ಸ್ಪರ್ಧೆಯ್ಲಲಿ ಭಾಗವಹಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಟಾಮಿ ಪಾತ್ರರಾಗಿದ್ದಾರೆ. ಈ ಯಾನಕ್ಕೆ ‘ಕೀರ್ತಿ ಚಕ್ರ’ ಪ್ರಶಸ್ತಿ ಸಂದಿದೆ.
ಇದನ್ನೂ ಓದಿ......
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.