ADVERTISEMENT

ರಾಜ್‌ಘಾಟ್‌: ಗಿಡನೆಟ್ಟು ಸಂಪ್ರದಾಯ ಮುಂದುವರಿಸಿದ UAEಯ 3ನೇ ತಲೆಮಾರಿನ ರಾಜಕುಮಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2024, 13:14 IST
Last Updated 9 ಸೆಪ್ಟೆಂಬರ್ 2024, 13:14 IST
<div class="paragraphs"><p>ಗಿಡನೆಟ್ಟು ಸಂಪ್ರದಾಯ ಮುಂದುವರಿಸಿದ UAEಯ 3ನೇ ತಲೆಮಾರಿನ ರಾಜಕುಮಾರ</p></div>

ಗಿಡನೆಟ್ಟು ಸಂಪ್ರದಾಯ ಮುಂದುವರಿಸಿದ UAEಯ 3ನೇ ತಲೆಮಾರಿನ ರಾಜಕುಮಾರ

   

ಚಿತ್ರಕೃಪೆ: @MEAIndia

ನವದೆಹಲಿ: ಮಹಾತ್ಮಾ ಗಾಂಧಿ ಸ್ಮಾರಕವಿರುವ ರಾಜ್‌ಘಾಟ್‌ನಲ್ಲಿ ಯುಎಇಯ ರಾಜಕುಮಾರ ಖಲೀದ್‌ ಬಿನ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರು ಗಿಡ ನೆಟ್ಟರು. ಈ ಮೂಲಕ ರಾಜ್‌ಘಾಟ್‌ನಲ್ಲಿ ಗಿಡನೆಟ್ಟ ಯುಎಇಯ ಮೂರನೇ ತಲೆಮಾರಿನ ರಾಜಕುಮಾರ ಎನಿಸಿಕೊಂಡರು.

ADVERTISEMENT

1992ರಲ್ಲಿ ಯುಎಇಯ ಮೊದಲ ಅಧ್ಯಕ್ಷ ಶೇಖ್‌ ಝಯೇದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಯಾನ್‌ ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ರಾಜ್‌ಘಾಟ್‌ನಲ್ಲಿ ಕ್ಯಾಸಿಯಾ ಫಿಸ್ಟ್ಯೂಲಾ (ಕಕ್ಕೆ ಗಿಡ)ವನ್ನು ನೆಟ್ಟಿದ್ದರು. ಬಳಿಕ ಅವರ ಮಗ ಯುಎಇಯ ಈಗಿನ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರು 2016ರಲ್ಲಿ ಭಾರತಕ್ಕೆ ಬಂದಾಗ ರಾಜ್‌ಘಾಟ್‌ನಲ್ಲಿ ಬಕುಳ (ರಂಜಲು) ಗಿಡವನ್ನು ನೆಟ್ಟಿದ್ದರು. ಈಗ ಅವರ ಮೂರನೇ ತಲೆಮಾರಿನ ರಾಜಕುಮಾರ ಖಲೀದ್‌ ಕೂಡ ಕ್ಯಾಸಿಯಾ ಫಿಸ್ಟ್ಯೂಲಾ (ಕಕ್ಕೆ ಗಿಡ)ವನ್ನು ನೆಡುವ ಮೂಲಕ ಸಂಪ್ರದಾಯ ಮುಂದುವರಿಸಿದ್ದಾರೆ.

ಭಾರತ ಮತ್ತು ಯುಎಇಯ ನಡುವಿನ ಸಂಬಂಧವು, ಗಿಡದ ಆಳದಲ್ಲಿರುವ ಬೇರಿನಂತೆ ಹಾಗೂ ಬೆಳೆಯುವ ಗಿಡದಂತೆ ಎಂದು ಯುಎಇ ಬಣ್ಣಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಮಹಾತ್ಮಾ ಗಾಂಧಿ ಅವರ ಸಾರ್ವತ್ರಿಕ ಬೋಧನೆ ಮತ್ತು ಭಾರತ–ಯುಎಇ ನಡುವಿನ ಸಂಬಂಧಗಳ ಗುರುತಾಗಿ ಮೂರನೇ ತಲೆಮಾರಿನ ರಾಜಕುನಾರ ಗಿಡವನ್ನು ನೆಟ್ಟರು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.