ADVERTISEMENT

ಅಪಘಾತ: ತಾಯಿಗೆ ₹ 93 ಲಕ್ಷ ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 19:30 IST
Last Updated 8 ಆಗಸ್ಟ್ 2024, 19:30 IST
<div class="paragraphs"><p>ಅಪಘಾತ</p></div>

ಅಪಘಾತ

   

ಪ್ರಾತಿನಿಧಿಕ ಚಿತ್ರ

ನವದೆಹಲಿ: 2013ರಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಸರ್ವಿಸ್‌ ಕನ್ಸಲ್ಟೆಂಟ್‌ ಆಗಿದ್ದ 26 ವರ್ಷದ ಮಗನನ್ನು ಕಳೆದುಕೊಂಡ ತಾಯಿಗೆ ₹93 ಲಕ್ಷಕ್ಕೂ ಅಧಿಕ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಜತೆಗೆ, ಮೋಟಾರು ಅಪಘಾತ ಪ್ರಕರಣದ ಪರಿಹಾರ ನಿರ್ಧರಿಸುವ ಸಂದರ್ಭದಲ್ಲಿ ಹೆಚ್ಚುವರಿ ಸವಲತ್ತು ಹಾಗೂ ಭತ್ಯೆಗಳನ್ನು ಮೃತರ ಮೂಲವೇತನಕ್ಕೆ ಸೇರಿಸಬೇಕು ಎಂದು ಸೂಚಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠವು, ಮನೆ ಬಾಡಿಗೆ ಭತ್ಯೆ, ಭವಿಷ್ಯ ನಿಧಿಗೆ ಕಂಪನಿಯ ಕೊಡುಗೆ ಇವೆಲ್ಲವನ್ನೂ ಮೃತರ ವೇತನಕ್ಕೆ ಸೇರಿಸಬೇಕು ಎಂದು ಹೇಳಿದೆ. 

ಅಪಘಾತದಲ್ಲಿ ಕರ್ನಾಟಕದ ಸೂರ್ಯಕಾಂತ್‌ ಎಂಬುವರು ಮೃತಪಟ್ಟಿದ್ದರು. ಅವರ ತಾಯಿ ಮೀನಾಕ್ಷಿ 2017ರ ಆಗಸ್ಟ್‌ನಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ₹1,04,01,000 ಮೊತ್ತ ಪರಿಹಾರ ನೀಡಬೇಕು ಎಂದು ವಾಹನ ಅಪಘಾತ ಕ್ಲೈಮ್ ಟ್ರಿಬ್ಯೂನಲ್‌ ನೀಡಿದ್ದ ಆದೇಶವನ್ನು ಮಾರ್ಪಡಿಸಿದ್ದ ಹೈಕೋರ್ಟ್‌ ಪರಿಹಾರ ಮೊತ್ತವನ್ನು ₹49,47,035ಕ್ಕೆ ಇಳಿಸಿತ್ತು. ಇದನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿತ್ತು.

ಹೈಕೋರ್ಟ್‌ ಆದೇಶ ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ವೇತನ ಪಡೆಯುತ್ತಿರುವ ಉದ್ಯೋಗಿಯ ಅಗತ್ಯತೆ ಹಾಗೂ ಭತ್ಯೆಗಳು ಒಂದೇ ರೀತಿ ಇರುವುದಿಲ್ಲ. ಅದು ಉದ್ಯೋಗಿಯ ಸೇವಾ ಅವಧಿಯ ಜತೆಗೆ ಹೆಚ್ಚುತ್ತದೆ. ಈ ಭತ್ಯೆಗಳನ್ನು ಮೂಲ ವೇತನದ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ’ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.