ADVERTISEMENT

ಮುಂಬೈ | ಘಾಟ್ಕೊಪರ್ ಹೋರ್ಡಿಂಗ್ ದುರಂತ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2024, 3:08 IST
Last Updated 17 ಮೇ 2024, 3:08 IST
   

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್‌ ಬಂಕ್‌ ಮೇಲೆ ಬಿದ್ದು ಸಂಭವಿಸಿದ ಅವಘಡದಲ್ಲಿ 16 ಮಂದಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಮುಂಬೈ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.

ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಾಲೀಕ ಭವೇಶ್ ಭಿಂಡೆ ಬಂಧಿತ ಆರೋಪಿ. ಘಟನೆಯ ಬಳಿಕ ಭಿಂಡೆ ತಲೆಮರೆಸಿಕೊಂಡಿದ್ದ. ಕ್ರೈಂ ಬ್ರಾಂಚ್ ಹಾಗೂ ಸಿಐಡಿ ತಂಡ ಉದಯಪುರದಲ್ಲಿ ಆರೋಪಿಯನ್ನು ಬಂಧಿಸಿವೆ.

ಮುಂಬೈನಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಘಾಟ್ಕೊಪರ್‌ನ ಪೆಟ್ರೋಲ್‌ ಬಂಕ್‌ ಮೇಲೆ 120X120 ಅಡಿಯ ಬೃಹತ್ ಗಾತ್ರದ ಹೋರ್ಡಿಂಗ್‌ ಬಿದ್ದಿತ್ತು. ಘಟನೆಯಲ್ಲಿ 16 ಜನ ಮೃತಪಟ್ಟು, 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅಲ್ಲದೇ ಹಲವು ವಾಹನಗಳೂ ಜಖಂಗೊಂಡಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.