ADVERTISEMENT

ಅತ್ಯಾಚಾರ, ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಡ್ರೈವಿಂಗ್ ಲೈಸನ್ಸ್, ಪಿಂಚಣಿ ರದ್ದು

ಐಎಎನ್ಎಸ್
Published 13 ಜುಲೈ 2018, 6:02 IST
Last Updated 13 ಜುಲೈ 2018, 6:02 IST
ಮನೋಹರ್ ಲಾಲ್ ಖಟ್ಟರ್
ಮನೋಹರ್ ಲಾಲ್ ಖಟ್ಟರ್   

ಚಂಡೀಗಢ:ಅತ್ಯಾಚಾರ, ದೌರ್ಜನ್ಯ ಮೊದಲಾದ ಪ್ರಕರಣದ ಆರೋಪಿಗಳಿಗೆ ಸರ್ಕಾರದ ಸೌಲಭ್ಯಗಳಾದ ವೃದ್ಯಾಪ್ಯ ಪಿಂಚಣಿ, ಅಂಗವಿಕಲರಿಗಿರುವ ಪಿಂಚಣಿ, ವಾಹನ ಚಾಲನೆ ಪರವಾನಗಿ ಮತ್ತು ಆಯುಧ ಪರವಾನಗಿ ರದ್ದು ಮಾಡಲು ಹರ್ಯಾಣ ಸರ್ಕಾರ ತೀರ್ಮಾನಿಸಿದೆ.

ಅತ್ಯಾಚಾರ ಅಥವಾ ಇನ್ಯಾವುದೇ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯ ತೀರ್ಪು ನೀಡುವವರೆಗೆ ಆರೋಪಿಗಳಿಗೆ ಈ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುವುದು. ಒಂದು ವೇಳೆ ಆರೋಪಿ ತಪ್ಪಿತಸ್ಥ ಎಂದು ಸಾಬೀತಾದರೆ ಈ ಸೌಲಭ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗುರುವಾರ ಹೇಳಿದ್ದಾರೆ.

ಮಹಿಳೆ ಮತ್ತು ಮಕ್ಕಳಿ ವಿರುದ್ಧ ದೌರ್ಜನ್ಯವೆಸಗಿಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಹೇಳಿದ ಖಟ್ಟರ್, ತಮ್ಮ ಸರ್ಕಾರ ಮಹಿಳೆಯರ ರಕ್ಷಣೆಗಾಗಿ ಬದ್ಧ ಎಂದಿದ್ದಾರೆ.

ಮಹಿಳೆಯರ ರಕ್ಷಣೆ ಹಾಗೂ ಸುರಕ್ಷೆಗಾಗಿ ಯೋಜನೆಯೊಂದನ್ನು ಜಾರಿ ಮಾಡಲು ಖಟ್ಟರ್ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆ ಆಗಸ್ಟ್ 15ರಂದು ಅಥವಾ ಆಗಸ್ಟ್ 26 ರಕ್ಷಾ ಬಂಧನ ದಿನ ಜಾರಿಯಾಗುವ ಸಾಧ್ಯತೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.