ಭೋಪಾಲ್: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಸ್ಫರ್ಧಿ 22ರ ಹರೆಯದ ರುಪಾಲಿ ನಿರಾಪುರೆ ಮೇಲೆ ಮಂಗಳವಾರ ಆ್ಯಸಿಡ್ ದಾಳಿ ನಡೆದಿದೆ.ರುಪಾಲಿ ಅವರು ಅಮೆರಿಕದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೊರಡುವ ಕೆಲವೇ ಗಂಟೆಗಳ ಮುನ್ನ ಈ ದಾಳಿ ನಡೆದಿದೆ.
ಹಾಡಹಗಲೇ ನಡೆದ ಈ ದಾಳಿಯಲ್ಲಿ ಆಕೆಯ ದೃಷ್ಟಿ ನಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರುಪಾಲಿ ಅವರೊಂದಿಗೆ ನೃತ್ಯ ಕಲಿಯುತ್ತಿದ್ದ ಮಹೇಂದ್ರ ಅಲಿಯಾಸ್ ಸೋನು ಎಂಬಾತ ಈ ಕೃತ್ಯ ನಡೆಸಿದ್ದು ಆತನನ್ನು ಬಂಧಿಸಲಾಗಿದೆ. ರುಪಾಲಿ ವಿವಾಹ ನಿವೇದನೆಯನ್ನು ನಿರಾಕರಿಸಿದ್ದಕ್ಕಾಗಿ ಸೋನು ಈ ಕೃತ್ಯ ಎಸಗಿದ್ದಾನೆ. ₹20 ಕೊಟ್ಟು ಆಸಿಡ್ ಖರೀದಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದಿದ್ದಾರೆ ಪೊಲೀಸರು.
ಆಕೆ ನೃತ್ಯಗಾರ್ತಿ.ಸೋನು ಆಕೆಯನ್ನು ಹೊರ ಕರೆದು ಮುಖಕ್ಕೆ ಆ್ಯಸಿಡ್ ಎರಚಿದ್ದಾನೆ.ಆಕೆಯ ಮುಖದಲ್ಲಿ ಯಾವುದೇ ಕಲೆಗಳಿಲ್ಲ ಆದರೆ ದೃಷ್ಟಿ ಮಂದವಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಚುಬೇ ಹೇಳಿದ್ದಾರೆ.ಫಾರೆನ್ಸಿಕ್ ಲ್ಯಾಬ್‍ಸಹಾಯದಿಂದ ಅದು ಯಾವ ರೀತಿಯ ಕೆಮಿಕಲ್ ಎಂಬುದು ಪತ್ತೆ ಹಚ್ಚಲಾಗುವುದು ಎಂದು ಮಾಧ್ಯಮದವರೊಡನೆ ಮಾತನಾಡಿದ ಚುಬೇ ಹೇಳಿದ್ದಾರೆ.
ರುಪಾಲಿ ಸೋನುಗಾಗಿ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಸೋನು ಆ್ಯಸಿಡ್ ಎರಚಿ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.