ADVERTISEMENT

ಚುಡಾಯಿಸಿದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಆ್ಯಸಿಡ್ ದಾಳಿ: 16 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 14:13 IST
Last Updated 28 ಆಗಸ್ಟ್ 2019, 14:13 IST
   

ಪಟನಾ: ಯುವತಿಯನ್ನು ಚುಡಾಯಿಸಿದಯುವಕರನ್ನುಪ್ರಶ್ನಿಸಿದ್ದಕ್ಕೆಆ್ಯಸಿಡ್ ದಾಳಿ ನಡೆಸಿದ್ದು, ಒಂದೇ ಕುಟುಂಬದ16 ಮಂದಿಗೆ ಗಾಯಗಳಾಗಿವೆ.

ಮೂರುಮಹಿಳೆಯರು ಸೇರಿದಂತೆ 16 ಮಂದಿಗೆ ಗಾಯಗಳಾಗಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.

ಪಟನಾದ ವೈಶಾಲಿ ಜಿಲ್ಲೆಯ ದಾವೂದ್‌ನಗರ್ ಮಾಲಿ ತೊಲ ಗ್ರಾಮದಲ್ಲಿ ಈ ಆ್ಯಸಿಡ್ ದಾಳಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಆರೋಪಿಗಳು ಕಾಲೇಜು ಹುಡುಗಿಯೊಬ್ಬಳನ್ನು ಚುಡಾಯಿಸಿ, ಕಿರುಕುಳ ನೀಡುತ್ತಿದ್ದರು.

ADVERTISEMENT

ಚುಡಾಯಿಸಿದನ್ನು ಪ್ರಶ್ನಿಸಿದ ಕುಟುಂಬದವರ ಮೇಲೆ ಸುಮಾರು 20 ಮಂದಿ ಯುವಕರು ದಾಳಿ ನಡೆಸಿದ್ದರು. ಮೊದಲಿಗೆ ವಾಗ್ವಾದ ನಡೆದು ಆಮೇಲೆ ಯುವಕರ ಗುಂಪು ಆ್ಯಸಿಡ್ ದಾಳಿ ನಡೆಸಿದೆ.ಇದರಲ್ಲಿ ಯುವತಿಯ ಕುಟುಂಬದ 16 ಮಂದಿಗೆಗಾಯಗಳಾಗಿವೆ ಎಂದು ಸದಾರ್ ಡಿಎಸ್‌ಪಿ ರಾಘವ್ ದಯಾಳ್ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.