ADVERTISEMENT

ಅದಾನಿ–ಹಿಂಡನ್‌ಬರ್ಗ್ | 3 ತಿಂಗಳಲ್ಲಿ ತನಿಖೆ ಮುಗಿಸಿ: ಸೆಬಿಗೆ ಸುಪ್ರೀಂ ಕೋರ್ಟ್

ಪಿಟಿಐ
Published 3 ಜನವರಿ 2024, 6:07 IST
Last Updated 3 ಜನವರಿ 2024, 6:07 IST
<div class="paragraphs"><p>ಅದಾನಿ (ಸಾಂದರ್ಭಿಕ ಚಿತ್ರ)</p></div>

ಅದಾನಿ (ಸಾಂದರ್ಭಿಕ ಚಿತ್ರ)

   

ರಾಯಿಟರ್ಸ್ ಚಿತ್ರ

ನವದೆಹಲಿ: ಅದಾನಿ ಸಮೂಹದ ವಿರುದ್ಧ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ಮಾಡಿರುವ ಆರೋಪಗಳ ತನಿಖೆಯನ್ನು ಮೂರು ತಿಂಗಳಿನೊಳಗೆ ಮುಗಿಸಬೇಕು ಎಂದು ಸೆಬಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ADVERTISEMENT

ಷೇರು ಬೆಲೆ ತಿರುಚಿದ ಪ್ರಕರಣ ಸಂಬಂಧ ಅದಾನಿ–ಹಿಂಡನ್‌ಬರ್ಗ್‌ ವಿವಾದದ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್ ಹೀಗೆ ನಿರ್ದೇಶಿಸಿದೆ.

ಅದಾನಿ ಸಮೂಹದ ವಿರುದ್ಧ ಇದ್ದ 24 ಆರೋಪಗಳ ಪೈಕಿ ಈಗಾಗಲೇ 22 ಪ್ರಕರಣಗಳ ತನಿಖೆ ಪೂರ್ಣಗೊಂಡಿದೆ. ತನಿಖೆ ಬಗ್ಗೆ ಸೆಬಿಗೆ ಇರುವ ಅಧಿಕಾರವನ್ನು ನಾವು ನಿಯಂತ್ರಿಸಲು ಬರುವುದಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರಿದ್ದ ಪೀಠ ಹೇಳಿತು.

ಅಲ್ಲದೆ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಅಥವಾ ಇನ್ಯಾವುದೇ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸುವುದಕ್ಕೆ ಅನುಮತಿ ಇಲ್ಲ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಕರಣ ಸಂಬಂಧ ವಕೀಲರಾದ ವಿಶಾಲ್ ತಿವಾರಿ, ಎಂ.ಎಲ್‌ ಶರ್ಮಾ, ಕಾಂಗ್ರೆಸ್ ನಾಯಕ ಜಯ ಠಾಕೂರ್‌ ಹಾಗೂ ಅನಾಮಿಕ ಜೈಸ್ವಾಲ್‌ ಅವರು ಪಿಐಎಲ್‌ ಸಲ್ಲಿಸಿದ್ದರು. ಕಳೆದ ವರ್ಷ ನವೆಂಬರ್ 24ರಂದು ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ ಇಂದಿಗೆ (ಜ.3) ತೀರ್ಪು ಕಾಯ್ದಿರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.