ADVERTISEMENT

ಅದಾನಿಯನ್ನು ಹೊಗಳಿ ಬರಹ ತಿರುಚಿದ ಕೈಗೊಂಬೆಗಳು: ವಿಕಿಪೀಡಿಯ ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:00 IST
Last Updated 21 ಫೆಬ್ರುವರಿ 2023, 22:00 IST
   

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರನ್ನು ಅತಿ ಯಾಗಿ ಹೊಗಳುವ ಲೇಖನಗಳನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ವಿಕಿಪೀಡಿಯದಲ್ಲಿ ಪ್ರಕಟಿಸಲಾಗಿದೆ. ಹೀಗೆ ಪ್ರಕಟಿಸಿದವ ರಲ್ಲಿ ಅದಾನಿ ಸಮೂಹದ ಸಿಬ್ಬಂದಿಯೂ ಇದ್ದಾರೆ. ತಟಸ್ಥವಲ್ಲದ ಈ ಬರಹಗಳ ಕುರಿತು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆ ಬರಹಗಳನ್ನು ಕೂಡ ವಿಕಿಪೀಡಿಯದಿಂದ ತೆಗೆದು ಹಾಕಲಾಗಿತ್ತು ಎಂದು ಇಂಟರ್‌ನೆಟ್‌ನಲ್ಲಿ ಉಚಿತ ಮಾಹಿತಿ ನೀಡಿಕೆಯ ಜಾಲತಾಣ ವಿಕಿಪೀಡಿಯ ಹೇಳಿದೆ.

ಅದಾನಿ ಸಮೂಹವು ಷೇರುಗಳ ದರವನ್ನು ಅಕ್ರಮವಾಗಿ ಏರಿಕೆ ಅಥವಾ ಇಳಿಕೆ ಮಾಡಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಇತ್ತೀಚೆಗೆ ವರದಿ ಪ್ರಕಟಿಸಿತ್ತು. ‘ಉಬ್ಬಿಸುವಿಕೆ’ಯ ಆರೋಪವೂ ಈ ವರದಿಯಲ್ಲಿ ಇತ್ತು.

ಅದಾನಿ ಮತ್ತು ಅವರ ಸಿಬ್ಬಂದಿಯು ವಿಕಿಪೀಡಿಯ ಓದುಗರನ್ನೂ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆಯೇ ಎಂದು ಈ ವರದಿಯ ಬಳಿಕ ವಿಕಿಪೀಡಿಯ ಪ್ರಶ್ನೆ ಹಾಕಿಕೊಂಡಿತ್ತು.

ADVERTISEMENT

‘ಖಂಡಿತವಾಗಿಯೂ ಮಾಡಿದ್ದಾರೆ’ ಎಂಬ ಉತ್ತರವನ್ನೂ ಕೊಟ್ಟು ಕೊಂಡಿತ್ತು.

‘40ಕ್ಕೂ ಹೆಚ್ಚು ನಿಷೇಧಿತ ಅಥವಾ ವೇತನ ಪಡೆಯುತ್ತಿರುವ ಅಘೋಷಿತ ಎಡಿಟರ್‌ಗಳು ಅದಾನಿ ಕುಟುಂಬ ಮತ್ತು ವಹಿವಾಟಿಗೆ ಸಂಬಂಧಿಸಿದ ಒಂಬತ್ತಕ್ಕೂ ಹೆಚ್ಚು ಲೇಖನಗಳನ್ನು ಸೃಷ್ಟಿಸಿದ್ದಾರೆ ಅಥವಾರ ಪ‍ರಿಷ್ಕರಿಸಿದ್ದಾರೆ. ಅವರಲ್ಲಿ ಹಲವರು ಬರೆದ ಹಲವು ಲೇಖನಗಳು ತಟಸ್ಥವಲ್ಲದ ಮಾಹಿತಿಯನ್ನು ಹೊಂದಿದ್ದವು ಅಥವಾ ಹೊಗಳಿಕೆಯನ್ನು ಮಾತ್ರ ಹೊಂದಿದ್ದವು’ ಎಂದು ವಿಕಿಪೀಡಿಯ ಹೇಳಿದೆ.

ಬರಹಗಳನ್ನು ಯಾರು ಬೇಕಿದ್ದರೂ ತಿದ್ದಿ ಉತ್ತಮಪಡಿಸಬಹುದು ಎಂಬ ತತ್ವದಲ್ಲಿ ವಿಕಿಪೀಡಿಯ ಕೆಲಸ ಮಾಡು ತ್ತದೆ. ಆದರೆ, ತಟಸ್ಥ ತತ್ವವನ್ನು ಅನುಸರಿ ಸಬೇಕು ಎಂಬ ನಿಯಮ ಇದೆ.

ಈ ಕುರಿತು ಅದಾನಿ ಸಮೂಹದ ಪ್ರತಿಕ್ರಿಯೆಗಾಗಿ ಕಳುಹಿಸಿದ ಇ–ಮೇಲ್‌ಗೆ ಪ್ರತಿಕ್ರಿಯೆ ಬಂದಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.