ನವದೆಹಲಿ: ‘ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ ಬಾಳು ಕತ್ತಲಾಗುತ್ತದೆ. ಅದು ವಿನಾಶಕಾರಿಯೂ ಹೌದು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಅಂತರರಾಷ್ಟ್ರೀಯ ಮಾದಕ ವಸ್ತುವ್ಯಸನ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
‘ವಿನಾಶಕ್ಕೆ ಕಾರಣವಾಗುವಂಥ ಮಾದಕ ವಸ್ತುಗಳಿಂದ ಭಾರತವನ್ನು ಮುಕ್ತ ಮಾಡುವುದು ಅಗತ್ಯ. ಮಾದಕ ವಸ್ತುಗಳ ವ್ಯಸನದ ವಿರುದ್ಧ ಬೇರು ಮಟ್ಟದಲ್ಲಿ ಹೋರಾಡುತ್ತಿರುವವರ ಕಾರ್ಯ ಶ್ಲಾಘನೀಯ’ ಎಂದು ಹೇಳಿದ್ದಾರೆ.
‘ಮಾದಕವಸ್ತುಗಳ ವ್ಯಸನವನ್ನು ಉದಾಸೀನ ಮಾಡುವ ಹಾಗಿಲ್ಲ. ಅದು ಅನುಕರಿಸಬೇಕಾದ ಮಾದರಿಯೂ ಅಲ್ಲ’ ಎಂದಿದ್ದಾರೆ.
ಮಾದಕವಸ್ತುಗಳ ವ್ಯಸನದಿಂದ ಮುಕ್ತವಾಗುವ ಕುರಿತು ಈ ಹಿಂದೆ ‘ಮನ್ ಕಿ ಬಾತ್‘ನಲ್ಲಿ ಪ್ರಸ್ತಾಪಿಸಿದ್ದ ತಮ್ಮ ವಿಚಾರಗಳನ್ನು ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.