ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾದ ಬಳಿಕ ಮೊದಲ ಬಾರಿಗೆ ನಡೆದ ವಿಜೃಂಭಣೆಯ ದೀಪಾವಳಿ ಉತ್ಸವವು ಎರಡು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ಸರಯೂ ನದಿ ತಟದಲ್ಲಿ ದೀಪಾವಳಿ ಪ್ರಯುಕ್ತ ಬುಧವಾರ ವಿಶ್ವದಾಖಲೆಯ 25,12,585 ದೀಪಗಳನ್ನು ಬೆಳಗಿಸಲಾಗಿದೆ.
ತೈಲದಿಂದ ಉರಿಯುವ ದೀಪಗಳನ್ನು ಬಳಸಿ ಆಯೋಜಿಸಿದ ಅತಿ ದೊಡ್ಡ ದೀಪೋತ್ಸವ ಹಾಗೂ ಅತಿ ಹೆಚ್ಚು ಜನರು ಏಕಕಾಲದಲ್ಲಿ ಆರತಿ ಬೆಳಗಿರುವುದು ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆದಿವೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿ ಸಾವಿರಾರು ಜನರು ಈ ದೀಪ ಮಹೋತ್ಸವವನ್ನು ಕಣ್ತುಂಬಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.